ADVERTISEMENT

ಹರಿಯಾಣದಲ್ಲಿ ಪೊಲೀಸರ ದಾಳಿ: ಒಂದೇ ದಿನ 950 ಮಂದಿ ಬಂಧನ, 710 ಎಫ್‌ಐಆರ್‌

ಪಿಟಿಐ
Published 7 ಸೆಪ್ಟೆಂಬರ್ 2022, 4:22 IST
Last Updated 7 ಸೆಪ್ಟೆಂಬರ್ 2022, 4:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ರಾಜ್ಯದ ಹಲವೆಡೆ ಅಕ್ರಮ ಚಟುವಟಿಕೆಗಳ ವಿರುದ್ಧ ಸರಣಿ ದಾಳಿ ನಡೆಸಿದ ಹರಿಯಾಣ ಪೊಲೀಸರು ದಿನವೊಂದರಲ್ಲೇ ಬರೋಬ್ಬರಿ 950 ಮಂದಿಯನ್ನು ಬಂಧಿಸಿದ್ದಾರೆ. 710 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಪಾತಕ ಕೃತ್ಯ, ಬೀದಿ ಅಪರಾಧ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದವರ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ನಡೆಸಿದ ಕಾರ್ಯಾಚರಣೆ ಇದಾಗಿದೆ ಎಂದು ಡಿಜಿಪಿ ಕೆ. ಅಗರ್ವಾಲ್‌ ತಿಳಿಸಿದ್ದಾರೆ.

ADVERTISEMENT

ಪಾತಕಿಗಳ ಎದೆಯಲ್ಲಿ ಭಯವನ್ನು ಹುಟ್ಟಿಸುವುದಕ್ಕಾಗಿ ಮತ್ತು ಅವರು ಅಪರಾಧ ಕೃತ್ಯಗಳಲ್ಲಿ ಮುಂದೆ ಭಾಗಿಯಾಗದಂತೆ ಕಟ್ಟೆಚ್ಚರ ವಹಿಸಲು ಅವರ ಮನೆ ಮತ್ತು ಬೀದಿಗಳ ಮೇಲೆ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು ಎಂದು ಡಿಜಿಪಿ ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಮಾರು 3,500 ಪೊಲೀಸರು ಪಾಲ್ಗೊಂಡಿದ್ದರು. 645 ತಂಡಗಳಾಗಿ ವಿಭಜನೆಗೊಂಡು ಹಲವಾರು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಸ್ವಯಂ ಘೋಷಿತ 45 ತಪ್ಪಿತಸ್ಥರನ್ನು ಮತ್ತು ಜಾಮೀನಿನ ಆಧಾರದಲ್ಲಿ ಹೊರಗೆ ಉಳಿದಿದ್ದ 34 ಮಂದಿಯನ್ನು ಬಂಧಿಸಲಾಗಿದೆ.

ಪಾನಿಪತ್‌ ಜಿಲ್ಲೆಯಲ್ಲಿ ಅತಿಹೆಚ್ಚು 116 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಗುರುಗ್ರಾಮದಲ್ಲಿ 108 ಹಾಗೂ ಅಂಬಾಲದಲ್ಲಿ 102 ಮಂದಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.