ಹೈದರಾಬಾದ್: ‘ವಕ್ಫ್ ತಿದ್ದುಪಡಿ ಮಸೂದೆಗೆ ನೀಡಿರುವ ಬೆಂಬಲವನ್ನು ಮಗನ ಭವಿಷ್ಯಕ್ಕಾಗಿ ವಾಪಸ್ ಪಡೆಯಿರಿ’ ಎಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ಧೀನ್ ಓವೈಸಿ ಅವರು ಭಾನುವಾರ ರಾತ್ರಿ ಆಗ್ರಹಿಸಿದರು.
ಕರ್ನೂಲ್‌ನಲ್ಲಿ ಜಮಾಯಿಸಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಮಸೂದೆಗೆ ಬೆಂಬಲ ನೀಡುವುದರ ಮೂಲಕ ನಿಮ್ಮ ಮಗನನ್ನು ಗಂಡಾಂತರಕ್ಕೆ ಗುರಿ ಮಾಡುತ್ತಿದ್ದೀರಿ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಎಚ್ಚರಿಸಿದರು.
‘ವಕ್ಫ್ ತಿದ್ದುಪಡಿ ಮಸೂದೆಯಿಂದ ಆಗುವ ಪ್ರಯೋಜನಗಳನ್ನು ಸಾರ್ವಜನಿಕರಿಗೆ ವಿವರಿಸಿ’ ಎಂದು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.
‘ಅಮರಾವತಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ನೀಡುತ್ತಿರುವ ಬೆಂಬಲಕ್ಕೆ ಪರ್ಯಾಯವಾಗಿ, ದೇಶದ ಸಂವಿಧಾನವನ್ನು ದುರ್ಬಲಗೊಳಿಸಲು ಬೆಂಬಲ ನೀಡುತ್ತಿದ್ದೀರಿ’ ಎಂದು ಟೀಕಿಸಿದರು.
‘ಟಿಡಿಪಿಯು ತನ್ನ ಬೆಂಬಲವನ್ನು ವಾಪಸ್ ಪಡೆದರೆ ಮಸೂದೆಯು ಕಾನೂನು ಆಗುವುದಿಲ್ಲ. ಆದರೆ ಮಸೂದೆಯನ್ನು ಬೆಂಬಲಿಸುವ ಮೂಲಕ ನೀವು ನಿಮ್ಮ ಪಕ್ಷಕ್ಕಷ್ಟೇ ಅಪಾಯವನ್ನುಂಟು ಮಾಡುತ್ತಿಲ್ಲ. ನಿಮ್ಮ ಮಗನ ಭವಿಷ್ಯಕ್ಕೂ ತೊಂದರೆ ಮಾಡುತ್ತಿದ್ದೀರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.