ADVERTISEMENT

ಆಕ್ಸ್‌ಫರ್ಡ್‌ ಲಸಿಕೆ ಬಳಕೆಗೆ ಬ್ರಿಟನ್‌ ಅನುಮೋದನೆ

ಮಾನವ ಬಳಕೆಗೆ ಔಷಧಿ ಮತ್ತು ಆರೋಗ್ಯ ರಕ್ಷಣೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಒಪ್ಪಿಗೆ

ಪಿಟಿಐ
Published 30 ಡಿಸೆಂಬರ್ 2020, 10:37 IST
Last Updated 30 ಡಿಸೆಂಬರ್ 2020, 10:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್‌ ಲಸಿಕೆಯನ್ನು ಮಾನವ ಬಳಕೆಗೆ ಬ್ರಿಟನ್‌ನ ಔಷಧಿ ಮತ್ತು ಆರೋಗ್ಯ ರಕ್ಷಣೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್‌ಆರ್‌ಎ) ಅನುಮೋದನೆ ನೀಡಿದೆ.

ಈ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಈ ಲಸಿಕೆಯನ್ನು ಸೆರಂ ಸಂಸ್ಥೆಯು ತಯಾರಿಸಲಿದೆ.

ಕಳೆದ ಸೋಮವಾರ ಸರ್ಕಾರ ಲಸಿಕೆಯ ಬಳಕೆ ಕುರಿತು ವಿವರಗಳನ್ನು ಸಲ್ಲಿಸಿದ ನಂತರ ಎಂಎಚ್‌ಆರ್‌ಎ ಮೌಲ್ಯಮಾಪನ ನಡೆಸಿತ್ತು.

ADVERTISEMENT

‘ಆಕ್ಸ್‌ಫರ್ಡ್‌ ಲಸಿಕೆ ಅಮೂಲಾಗ್ರ ಬದಲಾವಣೆ ತರಲಿದೆ. ವೈರಸ್‌ ವಿರುದ್ಧ ಲಸಿಕೆಯು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ’ ಎಂದು ಬ್ರಿಟನ್‌ ಸರ್ಕಾರ ರಚಿಸಿರುವ ತುರ್ತು ಪರಿಸ್ಥಿತಿಗಳ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯ ಪ್ರೊಫೆಸರ್‌ ಕ್ಯಾಲಂ ಸೆಂಪ್ಲ್‌ ತಿಳಿಸಿದ್ದಾರೆ.

ಬ್ರಿಟನ್‌ ಸರ್ಕಾರ ಈಗಾಗಲೇ 10 ಕೋಟಿ ಡೋಸ್‌ಗಳ ಇಂಜೆಕ್ಷನ್‌ಗೆ ಆದೇಶ ನೀಡಿದೆ. ಮಾರ್ಚ್‌ ಅಂತ್ಯದ ವೇಳೆಗೆ 4 ಕೋಟಿಯಷ್ಟು ಡೋಸ್‌ ದೊರೆಯುವ ಸಾಧ್ಯತೆ ಇದೆ.

ರೂಪಾಂತರ ಕೊರೊನಾಗೂ ಈ ಲಸಿಕೆ ಪರಿಣಾಮಕಾರಿಯಾಗುವ ವಿಶ್ವಾಸವಿದೆ ಎಂದು ಆಸ್ಟ್ರಾಜೆನೆಕಾ ಮುಖ್ಯಸ್ಥ ಪಾಸ್ಕಲ್‌ ಸೊರಿಯಾಟ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.