ADVERTISEMENT

Pahalgam Terror Attack| ದಿನದ ಬೆಳವಣಿಗೆ; 24 ಏಪ್ರಿಲ್‌ 2025

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 0:10 IST
Last Updated 25 ಏಪ್ರಿಲ್ 2025, 0:10 IST
<div class="paragraphs"><p>ಭದ್ರತಾ ಪಡೆ </p></div>

ಭದ್ರತಾ ಪಡೆ

   

l ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಕರ್ನಾಟಕದ ಸಚಿವ ಸಂಪುಟ ಸಭೆ ಖಂಡನಾ ನಿರ್ಣಯ ಕೈಗೊಂಡಿದೆ

l ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಮೃತರಾದ 26 ಮಂದಿಯಲ್ಲಿ ಒಬ್ಬರು ಮಾತ್ರ ವಿದೇಶಿ ಪ್ರಜೆ. ಇವರು  ‌ನೇಪಾಳದ ಪ್ರಜೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ADVERTISEMENT

l ಜಮ್ಮು ಮತ್ತು ಕಾಶ್ಮೀರಕ್ಕೆ ಹಾಗೂ ಭಾರತ–ಪಾಕಿಸ್ತಾನ ಗಡಿಯ 10 ಕಿ.ಮೀ ವ್ಯಾಪ್ತಿಯೊಳಗಿನ ಪ್ರದೇಶಗಳಿಗೆ ಭೇಟಿ ನೀಡದಂತೆ ಅಮೆರಿಕವು ತನ್ನ ನಾಗರಿಕರಿಗೆ ಸೂಚಿಸಿದೆ

l ಸೇನೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಶ್ರೀನಗರಕ್ಕೆ ಶುಕ್ರವಾರ ಭೇಟಿ

l ವಾಯುಪಡೆಯು ಸೆಂಟರ್‌ ಸೆಕ್ಟರ್‌ನಲ್ಲಿ ‘ಎಕ್ಸರ್‌ಸೈಜ್ ಆಕ್ರಮಣ’ ಹೆಸರಿನ ತಾಲೀಮು ಆರಂಭಿಸಿದ್ದು, ರಫೇಲ್‌ ಹಾಗೂ ಸುಖೋಯ್–30 ಯುದ್ಧವಿಮಾನಗಳು ಭಾಗಿ

l ಪಾಕಿಸ್ತಾನದ ಸಶಸ್ತ್ರ ಪಡೆಗಳು ಕೂಡ ಗಡಿಯಲ್ಲಿ ಎಚ್ಚರಿಕೆ ವಹಿಸಿವೆ. ಭಾರತದಿಂದ ಸಂಭಾವ್ಯ ದಾಳಿ ಕಾರಣದಿಂದ ಈ ಕ್ರಮ ಕೈಗೊಂಡಿವೆ.

l ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಶೇಷ ಪಡೆಯ ಯೋಧ ಝಂತು ಅಲಿ ಶೇಖ್‌ ಅವರು ಹುತಾತ್ಮರಾಗಿದ್ದಾರೆ

l ಪಾಕಿಸ್ತಾನವನ್ನು ಸಮರ್ಥಿಸಿಕೊಂಡಿದ್ದ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.