ADVERTISEMENT

ಆಪರೇಷನ್ ಸಿಂಧೂರ; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ಆಪರೇಷನ್‌ ಸಿಂಧೂರ: ಎನ್‌ಡಿಎ ಮಿತ್ರಪಕ್ಷಗಳ ಶ್ಲಾಘನೆ

ಪಿಟಿಐ
Published 5 ಆಗಸ್ಟ್ 2025, 9:50 IST
Last Updated 5 ಆಗಸ್ಟ್ 2025, 9:50 IST
<div class="paragraphs"><p>ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ</p></div>

ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ಆಪರೇಷನ್‌ ಸಿಂಧೂರ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ವಿಪಕ್ಷಗಳು ಸ್ವಯಂ ಹಾನಿ ಮಾಡಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ನರೇಂದ್ರ ಮೋದಿ, ‘ತಮ್ಮ ಕಾಲಿಗೆ ಕಲ್ಲಿನಿಂದ ಹೊಡೆದುಕೊಳ್ಳುವ ವಿರೋಧ ಪಕ್ಷವನ್ನು ನೀವು ಬೇರೆಲ್ಲಿ ಕಾಣುವಿರಿ’ ಎಂದು ಪ್ರಶ್ನಿಸಿದರು. 

ADVERTISEMENT

ಸಂಸತ್‌ ಭವನದಲ್ಲಿ ಮಂಗಳವಾರ ನಡೆದ ಎನ್‌ಡಿಎ ಮೈತ್ರಿಕೂಟದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಬೇಡಿಕೆಯನ್ನು ಕಾರ್ಯತಂತ್ರದ ತಪ್ಪು ಹೆಜ್ಜೆ ಎಂದು ಅವರು ಬಣ್ಣಿಸಿದರು. ಸಂಸತ್‌ನಲ್ಲಿ ನಡೆದ ಚರ್ಚೆಯು ವಿಪಕ್ಷಗಳಿಗೆ ತಿರುಗುಬಾಣವಾಯಿತು ಎಂದು ಪ್ರತಿಪಾದಿಸಿದರು.

ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕಿಂತ ದೊಡ್ಡ ಛೀಮಾರಿ ಇನ್ನೊಂದಿಲ್ಲ’ ಎಂದು ಅವರು ಹೇಳಿದರು.

ಭಾರತದ ಭಾಗ ಮತ್ತು ಭದ್ರತೆಯ ಬಗ್ಗೆ ರಾಹುಲ್‌ ಬಾಲಿಶ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ನ್ಯಾಯಾಲಯವು ಅವರಿಗೆ ಪಾಠ ಕಲಿಸಿದೆ ಎಂದು ಮೋದಿ ಹೇಳಿದರು.

1998ರಲ್ಲಿ ಮೈತ್ರಿಕೂಟವು ಸ್ಥಾಪನೆಯಾದಾಗಿನಿಂದ ಅದರ ಪ್ರಯಾಣವು ಯಶಸ್ಸಿನಿಂದ ಕೂಡಿದೆ ಮತ್ತು ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.

ಆಪರೇಷನ್‌ ಸಿಂಧೂರ ಬಗ್ಗೆ ಮೈತ್ರಿಕೂಟದ ನಾಯಕರು ಶ್ಲಾಘಿಸಿದರು. ಭಯೋತ್ಪಾದಕರನ್ನು ನಿಗ್ರಹಿಸಿದ್ದಕ್ಕಾಗಿ ಮೋದಿ ಅವರನ್ನು ಅಭಿನಂದಿಸಿದರು. ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ್ ಸಮಯದಲ್ಲಿ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯ ಮತ್ತು ಅಚಲ ಬದ್ಧತೆಯನ್ನು ಪ್ರಶಂಸಿಸಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. 

2024ರ ಜೂನ್‌ನಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ ಬಳಿಕ ಸಂಸತ್ತಿನ ಅಧಿವೇಶನಗಳಲ್ಲಿ ಮೈತ್ರಿಕೂಟದ ಸದಸ್ಯರು ಸಭೆ ಸೇರಿರುವುದು ಇದು ಎರಡನೇ ಬಾರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.