ಪಟ್ನಾ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ಮತ್ತಷ್ಟು ಪಾಠ ಕಲಿಸಬೇಕಿತ್ತು ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಗುರುವಾರ ಹೇಳಿದ್ದಾರೆ.
’ಆಪರೇಷನ್ ಸಿಂಧೂರ‘ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ’ನಾಗರಿಕತೆಯ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಪಹಲ್ಗಾಮ್ ದಾಳಿಗೆ ಸಂಚುರೂಪಿಸುವ ಮೂಲಕ ಪಾಕಿಸ್ತಾನ ಸಂಘರ್ಷ ಆರಂಭಿಸಿತು. ಆ ರಾಷ್ಟ್ರಕ್ಕೆ ಇನ್ನಷ್ಟು ಪಾಠ ಕಲಿಸಬೇಕಿತ್ತು‘ ಎಂದರು.
ಇದೇ ವೇಳೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಸರ್ವಪಕ್ಷಗಳ ನಿಯೋಗ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ’ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ. ನಿಯೋಗದ ಸದಸ್ಯರು ಪ್ರವಾಸವನ್ನು ಆನಂದಿಸುತ್ತಾರೆ ಅಷ್ಟೇ. ಇದು ಎಲ್ಲರಿಗೂ ಗೊತ್ತು‘ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.