ADVERTISEMENT

ನಿನ್ನ ಅಜ್ಜ, ತಾಯಿ ಕೊಂದವರು ಯಾರೆಂದು ಗೊತ್ತಿಲ್ಲವೇ?: ಭುಟ್ಟೊಗೆ ಒವೈಸಿ ಪಾಠ

ಪಿಟಿಐ
Published 28 ಏಪ್ರಿಲ್ 2025, 22:49 IST
Last Updated 28 ಏಪ್ರಿಲ್ 2025, 22:49 IST
<div class="paragraphs"><p>ಒವೈಸಿ </p></div>

ಒವೈಸಿ

   

ಅಹಮದಾಬಾದ್‌: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೂಡ ಭುಟ್ಟೊ ಹೇಳಿಕೆಗೆ ಕಿಡಿಕಾರಿದ್ದಾರೆ.

‘ತಾನೇನು ಮಾತನಾಡುತ್ತಿರುವೆ ಎನ್ನುವುದು ಗೊತ್ತಿದೆಯೇ? ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವ ಮೊದಲು ತನ್ನ ತಾಯಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಮತ್ತು ತನ್ನ ಅಜ್ಜ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಕೊಂದವರು ಭಯೋತ್ಪಾದಕರು ಎನ್ನುವುದನ್ನು ಮರೆಯಬೇಡ’ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

‘ನಿಮಗೆ ಅಮೆರಿಕ ಒಂದಿಷ್ಟು ಕೊಡದಿದ್ದರೆ ನಿಮಗೆ ದೇಶ ನಡೆಸುವ ಶಕ್ತಿಯೇ ಇಲ್ಲ. ಅಂತಹದರಲ್ಲಿ ನೀವು ನಮ್ಮನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದೀರಾ’ ಎಂದು ಮೂದಲಿಸಿದ್ದಾರೆ.

‘ಸಿಂಧೂ ನದಿ ನೀರು ನಿಲ್ಲಿಸಿದರೆ ಭಾರತೀಯರ ರಕ್ತ ಹರಿಸುತ್ತೇವೆ’ ಎಂದು ಬಿಲಾವಲ್‌ ಭುಟ್ಟೊ ಜರ್ದಾರಿ ಇತ್ತೀಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.