ADVERTISEMENT

ಬಿಹಾರ ಚುನಾವಣೆಗೆ ವೇತನ ಸಹಿತ ರಜೆ ಕಡ್ಡಾಯ: ಆಯೋಗ

ಪಿಟಿಐ
Published 18 ಅಕ್ಟೋಬರ್ 2025, 13:36 IST
Last Updated 18 ಅಕ್ಟೋಬರ್ 2025, 13:36 IST
.
.   

ಪಿಟಿಐ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನದ ದಿನ ವೇತನ ಸಹಿತ ರಜೆ ಪಡೆಯಲು ಮತದಾರರು ಅರ್ಹರಾಗಿರುತ್ತಾರೆ. ಈ ನಿಯಮ ಉಲ್ಲಂಘಿಸುವ ಉದ್ಯೋಗದಾತ ಸಂಸ್ಥೆಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ನವೆಂಬರ್‌ 11ರಂದು ನಡೆಯುವ ವಿವಿಧ ರಾಜ್ಯಗಳ ಎಂಟು ವಿಧಾನಸಭೆಗಳ ಉಪ ಚುನಾವಣೆಗೂ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 135ಬಿ ಪ್ರಕಾರ ಯಾವುದೇ ವ್ಯಾಪಾರ, ವ್ಯವಹಾರ ಅಥವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಯು ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ವೇತನ ಸಹಿತ ರಜೆ ನೀಡಬೇಕು ಎಂದು ತಿಳಿಸಿದೆ.

ದಿನಗೂಲಿ ಮತ್ತು ಸಾಮಾನ್ಯ ಕಾರ್ಮಿಕರಿಗೂ ಚುನಾವಣೆ ದಿನ ವೇತನ ಸಹಿತ ರಜೆ ನೀಡಬೇಕು ಎಂದು ಅದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.