ADVERTISEMENT

'ನಯಾ ಪಾಕ್‌’ ಉಗ್ರರ ವಿರುದ್ಧ ನೂತನ ಕ್ರಮ ಕೈಗೊಳ್ಳಲಿ: ಭಾರತ ಸರ್ಕಾರ

ಏಜೆನ್ಸೀಸ್
Published 9 ಮಾರ್ಚ್ 2019, 7:06 IST
Last Updated 9 ಮಾರ್ಚ್ 2019, 7:06 IST
ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್‌
ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್‌   

ನವದೆಹಲಿ:‘ನಯಾ ಪಾಕಿಸ್ತಾನ’(ಹೊಸ ಪಾಕಿಸ್ತಾನ) ಎಂದು ಹೇಳಿಕೊಳ್ಳುವ ಪಾಕಿಸ್ತಾನ ಸರ್ಕಾರ ಉಗ್ರರ ಗುಂಪುಗಳ ವಿರುದ್ಧ ಹಾಗೂ ಗಡಿಯಲ್ಲಿ ನಡೆಯುತ್ತಿರುವ ಉಗ್ರರ ಕೃತ್ಯಗಳ ವಿರುದ್ಧನೂತನವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ಸರ್ಕಾರ ಪಾಕ್‌ಗೆ ಒತ್ತಾಯಿಸಿದೆ.

ಪಾಕಿಸ್ತಾನ ಸರ್ಕಾರ ಜೈಷ್‌–ಎ–ಮೊಹಮ್ಮದ್‌ನ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದೆಯೇ? ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್‌ ಶನಿವಾರಪ್ರಶ್ನಿಸಿದ್ದಾರೆ.

ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ, ಆ ವಿಡಿಯೊಗಳನ್ನೇಕೆ ಬಿಡುಗಡೆ ಮಾಡುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.

ADVERTISEMENT

ಪಾಕಿಸ್ತಾನದ ಎಫ್‌–16 ವಿಮಾನವನ್ನು ಭಾರತೀಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರುಹೊಡೆದುರುಳಿಸಿದ್ದಾರೆ.ಅದಕ್ಕೆ ನಮ್ಮ ಬಳಿ ‘ಎಲೆಕ್ಟ್ರಾನ್‌’ ಸಾಕ್ಷ್ಯಗಳಿವೆ. ಬಾರತದ ವಿರುದ್ಧ ಪಾಕಿಸ್ತಾನ ಬಳಸಿರುವಎಫ್‌–16 ವಿಮಾನವು ಪಾಕಿಸ್ತಾನಕ್ಕೆ ಮಾರಾಟ ಮಾಡಿರುವ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸುವಂತೆ ನಾವು ಅಮೆರಿಕಕ್ಕೆ ಕೇಳಿದ್ದೇವೆ ಎಂದು ಹೇಳಿದರು.

ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯದ ಕಾನೂನುಬದ್ಧ ಕಾಳಜಿಗಳನ್ನು ಬಗೆಹರಿಸಲು ಪಾಕಿಸ್ತಾನ ಯಾವುದೇ ಬಗೆಯಲ್ಲು ಗಂಭೀರ ಉದ್ದೇಶವನ್ನು ತೋರಿಸಲಿಲ್ಲ ಎಂದು ಅವರು ಪಾಕ್‌ ವಿರುದ್ಧ ಹರಿಹಾಯ್ದಿದ್ದಾರೆ.

ಪುಲ್ವಾಮ ದಾಳಿ ನಡೆಸಿದ್ದಾಗಿ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ತಾನೇ ಒಪ್ಪಿಕೊಂಡಿದೆ. ಆದರೆ, ಜೈಷ್‌ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ನಿರಾಕರಿಸುತ್ತಿದ್ದಾರೆ. ಪಾಕಿಸ್ತಾನ ಜೈಷ್‌ ಸಂಘಟನೆಯನ್ನು ಪೋಷಿಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.