ADVERTISEMENT

ಗಡಿ ಬಳಿ ಪಾಕ್ ಡ್ರೋನ್‌ ಹಾರಾಟ

01 pak drone

ಪಿಟಿಐ
Published 1 ಏಪ್ರಿಲ್ 2019, 20:23 IST
Last Updated 1 ಏಪ್ರಿಲ್ 2019, 20:23 IST

ನವದೆಹಲಿ:ಪಂಜಾಬ್‌ನಖೇಮ್ಕರನ್ ಸೆಕ್ಟರ್‌ನಲ್ಲಿಭಾರತದ ಗಡಿ ಸಮೀಪ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನದ ಡ್ರೋನ್‌ ಅನ್ನುಭಾರತೀಯ ವಾಯುಪಡೆ ಸೋಮವಾರ ಪತ್ತೆಹಚ್ಚಿತು.

ಪಾಕಿಸ್ತಾನದ ಎರಡು ಎಫ್-16 ಯುದ್ಧ ವಿಮಾನಗಳೂ ಇದೇ ವೇಳೆ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಡ್ರೋನ್‌ಗಳು ಹಾರಾಡುತ್ತಿರುವುದು ರೆಡಾರ್‌ನಲ್ಲಿ ಗೋಚರಿಸಿತ್ತು. ತಕ್ಷಣ ಸುಖೋಯ್‌ ಯುದ್ಧವಿಮಾನ ಗಡಿ ಸಮೀಪ ಹೋಗುತ್ತಿದ್ದಂತೆ ಡ್ರೋನ್‌ ಪಾಕ್ ಕಡೆ ತೆರಳಿತು. ರಾಜಸ್ಥಾನ ಮತ್ತು ಗುಜರಾತ್‌ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನದ ಹಲವು ಡ್ರೋನ್‌ಗಳನ್ನು ಭಾರತ ಕಳೆದ ಎರಡು ತಿಂಗಳಲ್ಲಿ ಹೊಡೆದುರುಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.