ಪೂಂಚ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ತಾರ್ಕುಂಡಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಲು ಪ್ರಯತ್ನಿಸಿದ ಆರೋಪದಡಿ, ಪಾಕಿಸ್ತಾನದ ಪ್ರಜೆಯನ್ನು ಭಾರತೀಯ ಸೇನೆ ಭಾನುವಾರ ಬಂಧಿಸಿದೆ.
ಪಾಕಿಸ್ತಾನದ ಕೊಟ್ಲಿ ಜಿಲ್ಲೆಯ ನಿಕಿಯಾಲ್ ತೆಹ್ಸಿಲ್‌ನ ಡೆಟೋಟ್ ನಿವಾಸಿ ಮೊಹದ್ ಯೂಸುಫ್ ಅವರ ಮಗ ಮೊಹಮ್ಮದ್ ಆರಿಬ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಆತನನ್ನು ಸೇನಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯಿಂದ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.