ADVERTISEMENT

ರಾಜಸ್ಥಾನ ಗಡಿಯಲ್ಲಿ ಬಿಎಸ್‌ಎಫ್‌ನಿಂದ ಪಾಕಿಸ್ತಾನ ರೇಂಜರ್ ಬಂಧನ: ವರದಿ

ಪಿಟಿಐ
Published 4 ಮೇ 2025, 4:26 IST
Last Updated 4 ಮೇ 2025, 4:26 IST
ಬಿಎಸ್‌ಎಫ್‌ – ಸಾಂದರ್ಭಿಕ ಚಿತ್ರ
ಬಿಎಸ್‌ಎಫ್‌ – ಸಾಂದರ್ಭಿಕ ಚಿತ್ರ   

ನವದೆಹಲಿ: ರಾಜಸ್ಥಾನದಲ್ಲಿರುವ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ರೇಂಜರ್‌ ಒಬ್ಬರನ್ನು ಬಿಎಸ್‌ಎಫ್‌ ಬಂಧಿಸಿದೆ ಎಂಬುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಪಹಲ್ಗಾಮ್‌ ದಾಳಿ ಬಳಿಕ ಉಭಯ ದೇಶಗಳ ನಡುವಣ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದೆ.

ರಾಜಸ್ಥಾನ ಗಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ADVERTISEMENT

ಬಿಎಸ್‌ಎಫ್‌ ಯೋಧ ಪೂರ್ಣಮ್‌ ಕುಮಾರ್‌ ಶಾ ಎಂಬವರನ್ನು ಪಾಕಿಸ್ತಾನ ವಲಯಾಧಿಕಾರಿಗಳು ಏಪ್ರಿಲ್‌ 23ರಂದು ಬಂಧಿಸಿದ್ದರು. ಭಾರತದ ಕಡೆಯಿಂದ ತೀವ್ರ ಪ್ರತಿಭಟನೆಯ ಹೊರತಾಗಿಯೂ ಬಿಡುಗಡೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.