ADVERTISEMENT

ಭಾರತೀಯನನ್ನು ವರಿಸಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ಗೆ ಹೆಣ್ಣು ಮಗು

ಪಿಟಿಐ
Published 18 ಮಾರ್ಚ್ 2025, 9:10 IST
Last Updated 18 ಮಾರ್ಚ್ 2025, 9:10 IST
<div class="paragraphs"><p>ಸಚಿನ್ ಅವರೊಂದಿಗೆ ಸೀಮಾ ಹೈದರ್</p></div>

ಸಚಿನ್ ಅವರೊಂದಿಗೆ ಸೀಮಾ ಹೈದರ್

   

ನೋಯ್ಡಾ: 4 ಮಕ್ಕಳ ಜೊತೆ ಅಕ್ರಮವಾಗಿ ಭಾರತ ಪ್ರವೇಶಿಸಿ ಸಚಿನ್ ಮೀನಾ ಎಂಬುವರನ್ನು ವಿವಾಹವಾಗಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಮಂಗಳವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹಿಳೆ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ದಂಪತಿಯ ವಕೀಲ ಎ.ಪಿ. ಸಿಂಗ್ ಹೇಳಿದ್ದಾರೆ.

ADVERTISEMENT

'ಹೈದರ್ ಮತ್ತು ಮೀನಾ ಹೆಣ್ಣು ಮಗುವಿನ ಹೆಮ್ಮೆಯ ಪೋಷಕರಾಗಿದ್ದಾರೆ. ಸೀಮಾ ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಮಗುವಿಗೆ ಹೆಸರನ್ನು ಸೂಚಿಸಲು ನಾನು ಜನರಿಗೆ ಮನವಿ ಮಾಡುತ್ತೇನೆ’ಎಂದು ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನವರಾದ 32 ವರ್ಷದ ಸೀಮಾ ಹೈದರ್, ತನ್ನ ಮಕ್ಕಳನ್ನು ಕರೆದುಕೊಂಡು 2023ರ ಮೇ ತಿಂಗಳಲ್ಲಿ ಕರಾಚಿಯ ಮನೆಯಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರಯಾಣಿಸಿದ್ದರು.

2023ರ ಜುಲೈನಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ 27 ವರ್ಷದ ಮೀನಾ ಜೊತೆ ಸೀಮಾ ವಾಸಿಸುತ್ತಿರುವುದನ್ನು ಭಾರತೀಯ ಅಧಿಕಾರಿಗಳು ಪತ್ತೆಹಚ್ಚಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಈ ಜೋಡಿ 2019ರಲ್ಲಿ ಆನ್‌ಲೈನ್ ಗೇಮ್ ಆಡುವಾಗ ಸಂಪರ್ಕಕ್ಕೆ ಬಂದಿದ್ದರು ಎಂದು ವರದಿಯಾಗಿದೆ.

ತಮ್ಮ ಮೊದಲ ಪತಿ, ಪಾಕಿಸ್ತಾನದ ಗುಲಾಮ್ ಹೈದರ್ ಅವರಿಂದ ಸೀಮಾ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ.

ಹೈದರ್ ಮತ್ತು ಮೀನಾ ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹೈದರ್ ವಿರುದ್ಧ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪವಿದ್ದರೆ, ಅಕ್ರಮ ವಲಸಿಗನಿಗೆ ಆಶ್ರಯ ನೀಡಿದ್ದಕ್ಕಾಗಿ ಮೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮೀನಾರನ್ನು ಮದುವೆಯಾದ ನಂತರ ಹೈದರ್ ಹಿಂದೂ ಧರ್ಮವನ್ನು ಪಾಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.