ADVERTISEMENT

ಪಾಕಿಸ್ತಾನ ಯುದ್ಧ ವಿಮಾನ ’ಎಫ್‌–16’ ಹೊಡೆದುರುಳಿಸಿದ ಭಾರತೀಯ ವಾಯುಪಡೆ

ಏಜೆನ್ಸೀಸ್
Published 27 ಫೆಬ್ರುವರಿ 2019, 7:07 IST
Last Updated 27 ಫೆಬ್ರುವರಿ 2019, 7:07 IST
ಎಫ್‌ 16 ಯುದ್ಧ ವಿಮಾನ– ಸಾಂದರ್ಭಿಕ ಚಿತ್ರ
ಎಫ್‌ 16 ಯುದ್ಧ ವಿಮಾನ– ಸಾಂದರ್ಭಿಕ ಚಿತ್ರ   

ಜಮ್ಮುಕಾಶ್ಮೀರ: ಪಾಕಿಸ್ತಾನದ ಯುದ್ಧ ವಿಮಾನಗಳು ಬುಧವಾರ ಭಾರತೀಯ ವಾಯು ವಲಯ ಉಲ್ಲಂಘಿಸಿ ಒಳನುಸುಳಿ ಬಾಂಬ್‌ ದಾಳಿ ನಡೆಸುವ ಪ್ರಯತ್ನ ನಡೆಸಿದ್ದು, ಭಾರತೀಯ ವಾಯುಪಡೆ ತಕ್ಕ ಪ್ರತ್ಯುತ್ತರದ ಮೂಲಕದ ಜೆಟ್‌ಗಳನ್ನು ಹಿಮ್ಮೆಟಿಸಿವೆ ಹಾಗೂ ಒಂದು ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ.

ಭಾರತದೊಳಗೆ ನುಗ್ಗಿ ಮತ್ತೆ ವಾಪಾಸ್‌ ಆಗುತ್ತಿದ್ದ ಪಾಕಿಸ್ತಾನ ವಾಯುಪಡೆಯ ಎಫ್‌–16 ಯುದ್ಧ ವಿಮಾನದ ಮೇಲೆ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ದಾಳಿ ನಡೆಸಿ ಹೊಡೆದುರುಳಿಸಿವೆ.

ಪಾಕಿಸ್ತಾನ ವಲಯದ 3 ಕಿ.ಮೀ ವ್ಯಾಪ್ತಿಯಲ್ಲಿ ಎಫ್‌–16 ವಿಮಾನ ಪತನಗೊಂಡಿದ್ದು, ಪ್ಯಾರಾಚೂಟ್‌ ತೆರೆದುಕೊಂಡಿರುವುದನ್ನು ಗಮನಿಸಲಾಗಿದೆ. ಪೈಲಟ್‌ ಸ್ಥಿತಿ ತಿಳಿದು ಬಂದಿಲ್ಲ.

ADVERTISEMENT

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.