ADVERTISEMENT

ಜಮ್ಮು: ಪೂಂಛ್ ಮತ್ತು ಸಾಂಬಾ ಜಿಲ್ಲೆಯ ಗಡಿ ಭಾಗದಲ್ಲಿ ಪಾಕ್‌ ಡ್ರೋನ್

ಪಿಟಿಐ
Published 15 ಜನವರಿ 2026, 18:58 IST
Last Updated 15 ಜನವರಿ 2026, 18:58 IST
<div class="paragraphs"><p>ಡ್ರೋನ್</p></div>

ಡ್ರೋನ್

   

ಪೂಂಛ್‌/ ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ಸಾಂಬಾ ಜಿಲ್ಲೆಯ ಗಡಿ ಭಾಗದಲ್ಲಿ ಗುರುವಾರ ರಾತ್ರಿ ಪಾಕಿಸ್ತಾನದ ಡ್ರೋನ್‌ಗಳು ಹಾರಾಟ ನಡೆಸಿವೆ. 

ಪೂಂಛ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಮತ್ತು ಸಾಂಬಾ ಜಿಲ್ಲೆಯ ರಾಮಗಢ ವಲಯದಲ್ಲಿ ಡ್ರೋನ್‌ಗಳು ಕಂಡುಬಂದಿವೆ. ಭದ್ರತಾ ಪಡೆಗಳು ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಂಗಳವಾರ ಕೂಡಾ ಭಾರತ–ಪಾಕ್‌ ಗಡಿಯಲ್ಲಿ ಕೆಲವು ಡ್ರೋನ್‌ಗಳು ಹಾರಾಟ ನಡೆಸಿದ್ದವು. ಭದ್ರತಾ ಸಿಬ್ಬಂದಿ ಅವುಗಳತ್ತ ಗುಂಡು ಹಾರಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಗಡಿಯುದ್ದಕ್ಕೂ ಭಾರತದ ಸೇನೆ ಕಟ್ಟೆಚ್ಚರ ವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.