ADVERTISEMENT

ದುಸ್ಸಾಹಸಕ್ಕಿಳಿದರೆ ಪಾಕ್‌ ಸರ್ವನಾಶ: ಮನೋಜ್‌ ಸಿನ್ಹಾ

ಪಿಟಿಐ
Published 25 ಮೇ 2025, 16:08 IST
Last Updated 25 ಮೇ 2025, 16:08 IST
<div class="paragraphs"><p>ಮನೋಜ್‌ ಸಿನ್ಹಾ ಪಿಟಿಐ ಚಿತ್ರ</p></div>

ಮನೋಜ್‌ ಸಿನ್ಹಾ ಪಿಟಿಐ ಚಿತ್ರ

   

ಜಮ್ಮು: ಭವಿಷ್ಯದಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ‘ಭಯೋತ್ಪಾದಕ ದೇಶ’ವನ್ನು ಭಾರತೀಯ ಶಶಸ್ತ್ರ ಪಡೆಗಳು ನಾಶಪಡಿಸುವುದು ಖಚಿತವೆಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಭಾನುವಾರ ಹೇಳಿದ್ದಾರೆ.

ಇಲ್ಲಿ ನಡೆದ ಅಖಿಲ ಜಮ್ಮು–ಕಾಶ್ಮೀರ ಜಾಟ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆಯಿಂದ ಸಂಪೂರ್ಣ ಮುಕ್ತಗೊಳಿಸುವ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದರು. ಅಲ್ಲದೆ, ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದರು.

ADVERTISEMENT

‘ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಬೇರೆ ಬೇರೆಯಲ್ಲ. ಅವರ ಕೃತ್ಯಗಳಿಗೆ ಒಂದೇ ರೀತಿಯ ಶಿಕ್ಷೆ ಕಟ್ಟಿಟ್ಟಬುತ್ತಿ’ ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಧಕ್ಕೆ ತರುತ್ತಿರುವ ವಿಭಜಕ ಶಕ್ತಿಗಳ ವಿರುದ್ಧ ಹೋರಾಡಲು ದೃಢಸಂಕಲ್ಪ ಮಾಡುವಂತೆ ಮತ್ತು ಒಗ್ಗಟ್ಟಾಗಲು ಜಾಟ್ ಸಮುದಾಯವು ಸೇರಿ ಸಮಾಜದ ಎಲ್ಲಾ ವರ್ಗಗಳಿಗೆ ಅವರು ಮನವಿ ಮಾಡಿದರು.

‘ನಮ್ಮ ದೇಶದ ಗಡಿಯ ಬಳಿ ಜಾಟ್ ಸಮುದಾಯದವರು ಗಣನೀಯ ಜನಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರನ್ನು ದೇಶದ ಮೊದಲ ರಕ್ಷಣಾ ರೇಖೆಯನ್ನಾಗಿ ಗುರುತಿಸಲಾಗುತ್ತಿದೆ. ಮಾತೃಭೂಮಿಯ ಬಗೆಗಿನ ನಿಮ್ಮ ಭಕ್ತಿ ಸಮಾಜದಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಗಾಢವಾಗಿಸಿದೆ. ಈ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಈ ಸವಾಲಿನ ಸಮಯದಲ್ಲಿ, ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವಲ್ಲಿ ನಿಮ್ಮ ಜವಾಬ್ದಾರಿ ಹಿಂದೆಂದಿಗಿಂತಲೂ ಈಗ ಹೆಚ್ಚು ನಿರ್ಣಾಯಕವಾಗಿದೆ’ ಎಂದು ಸಿನ್ಹಾ ಹೇಳಿದರು.

ಗಡಿಯಲ್ಲಿ ತೊಂದರೆಗೆ ಒಳಗಾಗಿರುವ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.