ನವದೆಹಲಿ: ವಿಮಾನಗಳ ಹಾರಾಟಕ್ಕೆ ಪಾಕಿಸ್ತಾನ ವಾಯುಪ್ರದೇಶವನ್ನು ಮಂಗಳವಾರ ಮುಕ್ತಗೊಳಿಸಿದೆ.
ಬಾಲಾಕೋಟ್ ದಾಳಿ ನಡೆದ ನಂತರ ವಾಯುಪ್ರದೇಶದ ಮೇಲೆ ಪಾಕ್ ನಿರ್ಬಂಧ ಹೇರಿತ್ತು. ನಾಲ್ಕೂವರೆ ತಿಂಗಳ ನಂತರ ಇದನ್ನು ತೆರವುಗೊಳಿಸಿದೆ.
‘ಎಲ್ಲಾ ರೀತಿಯ ವಿಮಾನಗಳ ಹಾರಾಟಕ್ಕೆ ವಾಯುಪ್ರದೇಶ ಮುಕ್ತಗೊಳಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಕಡಿಮೆಯಾದ ಏರ್ ಇಂಡಿಯಾ ಕಾರ್ಯಾಚರಣಾ ವೆಚ್ಚ
ವಾಯುಪ್ರದೇಶವನ್ನು ಪಾಕಿಸ್ತಾನ ಮುಕ್ತಗೊಳಿಸಿದ್ದರಿಂದ ಏರ್ ಇಂಡಿಯಾಕ್ಕೆ ಕಾರ್ಯಾಚರಣಾ ವೆಚ್ಚ ಕಡಿಮೆಯಾಗಲಿದೆ.
ಅಮೆರಿಕ ಮತ್ತು ಯುರೋಪ್‌ಗಳಿಗೆ ಒಂದು ಮಾರ್ಗದ ಕಾರ್ಯಾಚರಣಾ ವೆಚ್ಚ ಕ್ರಮವಾಗಿ ₹20 ಲಕ್ಷ ಮತ್ತು ₹5 ಲಕ್ಷ ಇಳಿಕೆಯಾಗಲಿದೆ.
‘ವಿಮಾನದ ಬಳಕೆಯೂ ಹೆಚ್ಚಲಿದೆ. ಅಲ್ಲದೆ ಸಿಬ್ಬಂದಿ ಅಗತ್ಯವು ಶೇ 25 ರಷ್ಟು ಕಡಿಮೆಯಾಗಲಿದೆ’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.