ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯಲ್ಲಿ ಗುರುವಾರ ಪಾಕ್ ಸೇನೆಯು ನಡೆಸಿದ ಷೆಲ್ ದಾಳಿಗೆ ಸ್ಥಳೀಯ ಯುವಕನೊಬ್ಬ ಮೃತಪಟ್ಟಿದ್ದಾನೆ.
ಪೂಂಚ್ ಜಿಲ್ಲೆಯ ಮೆಂಧಾರ್ ಪ್ರದೇಶದಲ್ಲಿ ಸಂಜೆ 7ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಷೆಲ್ ದಾಳಿಗೆ ಟೈನ್ ಮಂಕೋಟೆ ಗ್ರಾಮದ ಗುಲ್‌ಫರಾಜ್ ಅಹಮದ್ (18) ಎಂಬುವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕೃಷ್ಣ ಘಾಟಿ ವಲಯವನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆಯು ದಾಳಿ ನಡೆಸಿದೆ. ಐದು ಗ್ರಾಮಗಳು ಷೆಲ್ ದಾಳಿಗೆ ಒಳಗಾಗಿದ್ದು, ಗಡಿಯಲ್ಲಿ ಪಾಕ್ ದಾಳಿ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.