
ಪಿಟಿಐ
ಪೆಶಾವರ: ತೆಹ್ರೀಕ್–ಇ–ತಾಲಿಬಾನ್ ಪಾಕಿಸ್ತಾನದ(ಟಿಟಿಪಿ) ಎರಡನೇ ಕಮಾಂಡರ್ ಅಮ್ಜದ್ ಮತ್ತು ಇತರ ನಾಲ್ವರು ಭಯೋತ್ಪಾದಕರನ್ನು ಪಾಕ್ ಸೇನೆ ಹತ್ಯೆ ಮಾಡಿದೆ.
‘ಪಾಕ್–ಅಫ್ಗಾನ್ ಗಡಿಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಅಮ್ಜದ್ ಸೇರಿ ಐವರನ್ನು ಹತ್ಯೆ ಮಾಡಲಾಗಿದೆ’ ಎಂದು ಸೇನೆಯ ಮಾಧ್ಯಮ ವಿಭಾಗ ಪ್ರಕಟಣೆ ನೀಡಿದೆ.
ಅಫ್ಗಾನಿಸ್ತಾನದಲ್ಲಿ ನೆಲಸಿದ್ದ ಅಮ್ಜದ್ ಪಾಕಿಸ್ತಾನದೊಳಗೆ ನಡೆದಿದ್ದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಆತ ಟಿಟಿಪಿ ಮುಖ್ಯಸ್ಥ ನೂರ್ ವಲಿಯ ನಂತರದ ಸ್ಥಾನದಲ್ಲಿದ್ದ.
ಆತನನ್ನು ಹುಡುಕಿಕೊಟ್ಟವರಿಗೆ 50 ಲಕ್ಷ ಪಾಕ್ ರೂಪಾಯಿ(₹15 ಲಕ್ಷ) ಬಹುಮಾನ ಘೋಷಣೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.