ADVERTISEMENT

ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ

ಪಿಟಿಐ
Published 27 ಫೆಬ್ರುವರಿ 2019, 5:09 IST
Last Updated 27 ಫೆಬ್ರುವರಿ 2019, 5:09 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಮೇಲೆ ಪಾಕಿಸ್ತಾನದ ಪಡೆಗಳು ಬುಧವಾರ ತೀವ್ರ ಶೆಲ್‌ ದಾಳಿ ನಡೆಸಿವೆ.

ಪಾಕಿಸ್ತಾನದ ಗಡಿಯೊಳಗಿನ ಜೈಷ್‌–ಎ–ಮೊಹಮ್ಮದ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯ ವೈಮಾನಿಕ ದಾಳಿ ನಡೆದ ಬೆನ್ನಲೇ ಪಾಕಿಸ್ತಾನ ಸೇನೆ ಭಾರತದ ಮೇಲೆ ಶೆಲ್‌ ದಾಳಿ ನಡೆಸುತ್ತಿದೆ.

ಬುಧವಾರ ಬೆಳಗಿನ ಶಾವ ಪಾಕಿಸ್ತಾನ ಸೇನೆ ಭಾರತದ ಸೇನಾ ವಲಯಗಳ ಸಮೀಪ ಶೆಲ್‌ಗಳನ್ನು ತೂರಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಭಾರತ ಪ್ರತಿದಾಳಿಯ ಮೂಲಕ ಪಾಕಿಸ್ತಾನ ಪಡೆಗಳಿಗೆ ಪ್ರತ್ಯುತ್ತರ ನೀಡಿದ್ದು, ಯಾವುದೇ ಸಾವು ವರದಿಯಾಗಿಲ್ಲ. ಇಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ಚಕಮಕಿಯು ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.