ADVERTISEMENT

ಮತ್ತೆಂದೂ ನೀಚ ಕೃತ್ಯಕ್ಕೆ ಕೈ ಹಾಕದಂತೆ ಪಾಕ್ ಅನ್ನು ಮಂಡಿಯೂರಿಸಲಾಗುವುದು: ಸಚಿವ

ಪಿಟಿಐ
Published 27 ಏಪ್ರಿಲ್ 2025, 4:35 IST
Last Updated 27 ಏಪ್ರಿಲ್ 2025, 4:35 IST
ಸಚಿವ ಹರ್ದೀಪ್‌ ಸಿಂಗ್‌ ಪುರಿ
ಸಚಿವ ಹರ್ದೀಪ್‌ ಸಿಂಗ್‌ ಪುರಿ   

ಚಂಡೀಗಢ: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಕುರಿತು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ, ‘ನೆರೆಯ ದೇಶವು, ಇಂತಹ ಹೇಯ ಕೃತ್ಯವನ್ನು ಮತ್ತೆಂದೂ ಮಾಡದಂತೆ ಪಾಕಿಸ್ತಾನವನ್ನು ಮಂಡಿಯೂರಿಸಲಾಗುವುದು’ ಎಂದು ಹೇಳಿದ್ದಾರೆ.

ಮೊಹಾಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನ ಅಂತಿಮ ಅವನತಿಯಲ್ಲಿರುವ ದೇಶವಾಗಿದ್ದು, ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಬಳಸುತ್ತಿದೆ. ಈ ಬಾರಿ ಅವರು ತಪ್ಪು ಲೆಕ್ಕಾಚಾರ ಮಾಡಿದ್ದಾರೆಂದು ಭಾವಿಸುತ್ತೇನೆ. ಏಕೆಂದರೆ, ಭಾರತದ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಗೊಳಿಸಿರುವ ಕುರಿತು ಮಾತನಾಡಿದ ಅವರು, ‘ಪಾಕಿಸ್ತಾನದ ಮೇಲೆ ಸೂಕ್ತ ಬೆಲೆ ತೆರಬೇಕಾದ ಇಂತಹ ಕ್ರಮವನ್ನು ಭಾರತ ತೆಗೆದುಕೊಂಡಿರುವುದು ಇದೇ ಮೊದಲು. ನೆರೆಯ ದೇಶವು ಮತ್ತೆಂದೂ ಇಂತಹ ನೀಚ ಕೃತ್ಯಕ್ಕೆ ಕೈ ಹಾಕದಂತೆ ಅದನ್ನು ಮಂಡಿಯೂರಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.