ADVERTISEMENT

‘ಪಾಕ್‌ ವ್ಯಕ್ತಿಗೆ ಭಾರತದ ಪೌರತ್ವ’

ಪಿಟಿಐ
Published 25 ಮಾರ್ಚ್ 2019, 17:01 IST
Last Updated 25 ಮಾರ್ಚ್ 2019, 17:01 IST
   

ಮುಂಬೈ: ಐವತ್ತು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆ ಆಸಿಫ್‌ ಕರಾಡಿಯಾ ಅವರಿಗೆ 10 ದಿನಗಳ ಒಳಗೆ ಭಾರತದ ಪೌರತ್ವ ನೀಡುವುದಾಗಿ ಕೇಂದ್ರ ಗೃಹ ಸಚಿವಾಲಯ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಆಸಿಫ್‌ ಕರಾಡಿಯಾ ಪೋಷಕರು ಭಾರತ ಮೂಲದವರು. ಆಸಿಫ್‌ ಅವರ ವೀಸಾ ಅವಧಿ ಪೂರ್ಣಗೊಂಡ ಬಳಿಕ ಅಧಿಕಾರಿಗಳು ವೀಸಾ ಅವಧಿ ವಿಸ್ತರಣೆಗೆ ಆಸಿಫ್‌ ಅವರ ಪಾಕಿಸ್ತಾನದ ಪಾಸ್‌ಪೋರ್ಟ್‌ ಒದಗಿಸಬೇಕೆಂದು ಕೇಳಿದ್ದರು. ಆಗ ಪೋಷಕರು 2016ರ ಡಿಸೆಂಬರ್‌ನಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ದಾವೆಗಳು ಮತ್ತು ಕೋರ್ಟ್‌ನ ಹಲವು ಆದೇಶಗಳ ನಂತರ ಕೊನೆಗೆ ಸಚಿವಾಲಯ ಸೋಮವಾರ ಆಸಿಫ್‌ಗೆ ಭಾರತದ ಪೌರತ್ವ ನೀಡುವುದಾಗಿ ಹೇಳಿದೆ.

‘ಕರಾಚಿಯಲ್ಲಿ ಜನಿಸಿದರೂ ಕೆಲ ದಿನಗಳಲ್ಲೇ ತಾಯಿಯೊಂದಿಗೆ ಭಾರತಕ್ಕೆ ಬಂದು ಮುಂಬೈನಲ್ಲೇ ನೆಲೆಸಿದೆ. ಈ ಕಾರಣ ಪಾಕಿಸ್ತಾನದ ಪಾಸ್‌ಪೋರ್ಟ್‌ ಆಗಲೀ ಪಾಕಿಸ್ತಾನ ಸರ್ಕಾರ ನೀಡುವ ಯಾವುದೇ ದಾಖಲೆಯಾಗಲೀ ನನ್ನ ಬಳಿ ಇಲ್ಲ’ ಎಂದು ಆಸಿಫ್‌ ಕೋರ್ಟ್‌ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.