ADVERTISEMENT

ಜಮ್ಮು: ಪಾಕಿಸ್ತಾನದ ಒಳನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್‌

ಪಿಟಿಐ
Published 8 ಫೆಬ್ರುವರಿ 2021, 8:51 IST
Last Updated 8 ಫೆಬ್ರುವರಿ 2021, 8:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರು ಅಂತರರಾಷ್ಟ್ರೀಯ ಗಡಿಯ ಸಮೀಪ ಸೋಮವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ಚಕ್ ಫಕ್ವಿರಾ ಗಡಿ ಪೋಸ್ಟ್ ಬಳಿಬೆಳಿಗ್ಗೆ 9.45 ರ ಸುಮಾರಿಗೆ ಈ ಘಟನೆ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.

‘ಹಲವು ಬಾರಿ ಎಚ್ಚರಿಕೆ ನೀಡಿದ ಬಳಿಕವೂ ನುಸುಳುಕೋರ, ಗಡಿ ದಾಟಲು ಪ್ರಯತ್ನಿಸಿದ. ಅಂತರರಾಷ್ಟ್ರೀಯ ಗಡಿಯಿಂದ 40 ಮೀಟರ್‌ ದೂರದಲ್ಲಿ ಭಾರತದ ಒಳಗೆ ಅವನ ಮೃತ ದೇಹ ‍‍‍ಪತ್ತೆಯಾಗಿದೆ’ ಎಂದು ಬಿಎಸ್‌ಎಫ್‌ ವಕ್ತಾರ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.