ADVERTISEMENT

ಜೈಪುರ ಜೈಲಿನಲ್ಲಿ ಜಗಳ: ಪಾಕ್ ಕೈದಿ ಹತ್ಯೆ

ಪಿಟಿಐ
Published 20 ಫೆಬ್ರುವರಿ 2019, 12:53 IST
Last Updated 20 ಫೆಬ್ರುವರಿ 2019, 12:53 IST
   

ಜೈಪುರ: ಜೈಲಿನೊಳಗೆ ಕೈದಿಗಳ ನಡುವೆ ನಡೆದ ಜಗಳದಲ್ಲಿ ಪಾಕಿಸ್ತಾನ ಮೂಲದ ಕೈದಿಯೊಬ್ಬ ಹತ್ಯೆಯಾಗಿದ್ದಾನೆ.

ಸೆಂಟ್ರಲ್ ಜೈಲಿನಲ್ಲಿ ಪಾಕಿಸ್ತಾನದ ಕೈದಿಯೊಬ್ಬನ ಹತ್ಯೆಯಾಗಿದ್ದು,ಈ ಪ್ರಕರಣದ ಬಗ್ಗೆ ಜ್ಯುಡಿಷ್ಯಲ್ ಮೆಜಿಸ್ಟ್ರೇಟ್ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಾಜಸ್ಥಾನದ ಡಿಜಿಪಿ ಕಪಿಲ್ ಗಾರ್ಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪುಲ್ವಾಮ ದಾಳಿ ನಂತರ ಜೈಪುರ ಜೈಲಿನಲ್ಲಿ ನಡೆದ ಪಾಕ್ ಕೈದಿಯ ಕೊಲೆ ಉಭಯ ರಾಷ್ಟ್ರಗಳ ನಡುವಿನ ವೈಷಮ್ಯವನ್ನು ಇನ್ನೂ ಹೆಚ್ಚಿಸಿದೆ.

ADVERTISEMENT

ಪಾಕಿಸ್ತಾನದ ಪಂಜಾಬ್ ಸಿಯಾಲ್‍ಕೋಟ್ ಮೂಲದ ಶಖುರುಲ್ಲಾ (50) ಎಂಬ ಕೈದಿಯನ್ನು ಸಹ ಕೈದಿಗಳು ಕಲ್ಲು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2011ರಿಂದ ಶಖುರುಲ್ಲಾನನ್ನು ಜೈಲಿನ ವಿಶೇಷ ಕೊಠಡಿಯಲ್ಲಿರಿಸಲಾಗಿತ್ತು. ಕಾನೂನು ಬಾಹಿರ ಕೃತ್ಯತಡೆ ಕಾಯ್ದೆಯಡಿಯಲ್ಲಿ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ಜೈಲಿನ ಐಜಿ ರೂಪಿಂದರ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.