ADVERTISEMENT

ಗಡಿಯಲ್ಲಿ ಪಾಕ್ ಸೇನೆಯಿಂದ ಮುಂದುವರಿದ ಶೆಲ್ ದಾಳಿ

ಪಿಟಿಐ
Published 10 ಆಗಸ್ಟ್ 2020, 6:46 IST
Last Updated 10 ಆಗಸ್ಟ್ 2020, 6:46 IST
ಶೆಲ್‌ ಬಾಂಬ್‌ನ ಅವಶೇಷ ತೋರಿಸುತ್ತಿರುವ ಜಮ್ಮು ಕಾಶ್ಮೀರದ ಯುವಕ
ಶೆಲ್‌ ಬಾಂಬ್‌ನ ಅವಶೇಷ ತೋರಿಸುತ್ತಿರುವ ಜಮ್ಮು ಕಾಶ್ಮೀರದ ಯುವಕ    

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿಗಡಿ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘನೆ ಮುಂದುವರಿದಿದ್ದು, ಸೋಮವಾರವೂ ಗುಂಡಿನ ದಾಳಿ ನಡೆಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಅಪ್ರಚೋಚಿತ ಗುಂಡಿನ ದಾಳಿಯು ಬಾಲಾಕೋಟ್ ವಲಯದಲ್ಲಿ ಬೆಳಿಗ್ಗೆ10.15 ಗಂಟೆಗೆ ಆರಂಭವಾಗಯಿತು. ಗಡಿ ಭಾಗದಲ್ಲಿ ನಿಯೋಜಿತರಾಗಿದ್ದ ಭಾರತೀಯ ಸೇನೆಯ ಸಿಬ್ಬಂದಿಯೂ ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಗುಂಡಿನ ದಾಳಿಯಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಸೇನೆಯ ಯೋಧರು ತಾರ್ಕುಂದಿ ಗ್ರಾಮವನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿದ್ದು, ಗ್ರಾಮಸ್ಥರಲ್ಲಿಭೀತಿಯನ್ನು ಉಂಟು ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಕಿಸ್ತಾನ ಸೇನೆಯು ಭಾನುವಾರ ಮಾನ್ಕೊಟ್, ಶಾಪುರ್, ಕಿರ್ನಿ ಮತ್ತು ಕೃಷ್ಣ ಘಾಟಿ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.