ADVERTISEMENT

ಕಾಶ್ಮೀರದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆ: ಇವಿಎಂ ಬದಲು ಮತಪತ್ರ ಬಳಕೆಗೆ ನಿರ್ಧಾರ

ಏಜೆನ್ಸೀಸ್
Published 13 ಫೆಬ್ರುವರಿ 2020, 9:51 IST
Last Updated 13 ಫೆಬ್ರುವರಿ 2020, 9:51 IST
ಕಾಶ್ಮೀರದಲ್ಲಿ ಚಳಿಗೆ ನಡುಗುತ್ತಿದ್ದ ಮಗುವಿಗೆ ಅಜ್ಜನ ರಕ್ಷೆ (ಪಿಟಿಐ ಚಿತ್ರ).
ಕಾಶ್ಮೀರದಲ್ಲಿ ಚಳಿಗೆ ನಡುಗುತ್ತಿದ್ದ ಮಗುವಿಗೆ ಅಜ್ಜನ ರಕ್ಷೆ (ಪಿಟಿಐ ಚಿತ್ರ).   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾರ್ಚ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ (ಗ್ರಾಮ ಪಂಚಾಯಿತಿ) ನಡೆಯಲಿದೆ. ರಾಜ್ಯದ ವಿಶೇಷಾಧಿಕಾರ ರದ್ದಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು.

‘ಎಲ್ಲ ಬ್ಲಾಕ್‌ಗಳಲ್ಲಿ ಖಾಲಿಯಿರುವ ಪಂಚಾಯಿತಿ ಸದಸ್ಯತ್ವದ ಸ್ಥಾನಗಳಿಗೆ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗುವುದು. ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್ ಘೋಷಿಸಿದರು.

ಕಳೆದ ಆಗಸ್ಟ್‌ ತಿಂಗಳಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿ ರದ್ದುಪಡಿಸಿದನಂತರ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ರಾಜಕೀಯ ವಿದ್ಯಮಾನ ಇದು. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಪ್ರತ್ಯೇಕಿಸಿ, ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನು ಕೇಂದ್ರ ಸರ್ಕಾರವು ಕಳೆದ ಆಗಸ್ಟ್‌ನಲ್ಲಿ ಘೋಷಿಸಿತ್ತು.

ADVERTISEMENT

ಇದೀಗ ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಲೆಫ್ಟಿನೆಂಟ್ ಜನರಲ್ ಜಿ.ಸಿ.ಮುರ್ಮು ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಇಂಟರ್ನೆಟ್ ಸಂಪರ್ಕ ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪನೆಯಾಗಿಲ್ಲ. ಸಂವಹನದ ಮೇಲಿನ ನಿರ್ಬಂಧವೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.