ಮುಂಬೈ: ಅಮೆರಿಕದ ನ್ಯೂಜೆರ್ಸಿಯಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ಜಸ್‌ರಾಜ್ ಅವರ ಪಾರ್ಥಿವ ಶರೀರವನ್ನು ಇಂದು (ಬುಧವಾರ) ಮಧ್ಯಾಹ್ನ ಮುಂಬೈಗೆ ತರಲಾಗುವುದು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.
ಪಾರ್ಥಿವ ಶರೀರವನ್ನುಮುಂಬೈನ ವರ್ಸೊವಾ ನಿವಾಸದಲ್ಲಿ ಸಂಜೆ 4 ಗಂಟೆವರೆಗೆ ಕುಟುಂಬ ಸದಸ್ಯರ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೆವಾತಿ ಘರಾನಾದ ಗಾಯಕ ಪಂಡಿತ್ ಜಸ್‌ರಾಜ್ ಅವರು ಕೊರೊನಾ–ಲಾಕ್‌ಡೌನ್ ಘೋಷಣೆಯ ಸಮಯದಲ್ಲಿ ಅಮೆರಿಕದ ನ್ಯೂಜೆರ್ಸಿಯಲ್ಲಿದ್ದರು. ನಂತರ ಅಲ್ಲೇ ವಾಸ್ತವ್ಯ ಮುಂದುವರಿಸಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.