ADVERTISEMENT

ಅಣೆಕಟ್ಟು ಸುರಕ್ಷತಾ ಮಸೂದೆಗೆ ಸಂಸತ್‌ ಒಪ್ಪಿಗೆ

ಪಿಟಿಐ
Published 8 ಡಿಸೆಂಬರ್ 2021, 14:28 IST
Last Updated 8 ಡಿಸೆಂಬರ್ 2021, 14:28 IST
ಗಜೇಂದ್ರ ಸಿಂಗ್‌ ಶೇಖಾವತ್‌
ಗಜೇಂದ್ರ ಸಿಂಗ್‌ ಶೇಖಾವತ್‌   

ನವದೆಹಲಿ: ದೇಶದ ನಿಗದಿತ ಅಣೆಕಟ್ಟುಗಳ ಸುರಕ್ಷತೆಗಾಗಿ ಸಾಂಸ್ಥಿಕ ಕಾರ್ಯವಿಧಾನ ಸ್ಥಾಪಿಸುವ ಮಸೂದೆಯನ್ನು ಸಂಸತ್ತು ಬುಧವಾರ ಅಂಗೀಕರಿಸಿದೆ.

ರಾಜ್ಯಸಭೆಯು ಕೆಲವೊಂದು ಸಣ್ಣ ಬದಲಾವಣೆಗಳೊಂದಿಗೆಡಿಸೆಂಬರ್‌ 2ರಂದುಅಣೆಕಟ್ಟು ಸುರಕ್ಷತಾ ಮಸೂದೆಗೆ ಅನುಮೋದನೆ ನೀಡಿತ್ತು. ಇದೇ ವೇಳೆ ಮಸೂದೆಯ ವರ್ಷವನ್ನು 2019–2021 ಎಂದು ಬದಲಾವಣೆ ಮಾಡಲಾಗಿತ್ತು.

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ADVERTISEMENT

ಅಣೆಕಟ್ಟು ವೈಫಲ್ಯ ಸಂಬಂಧಿತ ವಿಪತ್ತುಗಳಿಂದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಮಸೂದೆಗೆ ಅಂಗೀಕಾರ ನೀಡಲಾಗಿದ್ದು, ಈ ಮಸೂದೆಯಡಿ ನಿಗದಿತ ಅಣೆಕಟ್ಟುಗಳ ಕಣ್ಗಾವಲು, ಪರಿಶೀಲನೆ, ಕಾರ್ಯಾಚರಣೆ ನಡೆಸಲಾಗುತ್ತದೆ.ಅಣೆಕಟ್ಟುಗಳ ಸುರಕ್ಷತೆಗಾಗಿ ರಾಷ್ಟ್ರೀಯ ಸಮಿತಿಯನ್ನು (ಎನ್‌ಸಿಡಿಎಸ್‌) ರೂಪಿಸುವಂತೆಯೂ ಈ ಮಸೂದೆಯಲ್ಲಿ ಹೇಳಲಾಗಿದೆ.

ಈ ಹಿಂದೆ 2019, ಆಗಸ್ಟ್‌ನಲ್ಲಿ ಲೋಕಸಭೆಯು ಈ ಮಸೂದೆಯನ್ನು ಅಂಗೀಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.