ADVERTISEMENT

ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆ ಅಂಗೀಕಾರ

ಪಿಟಿಐ
Published 12 ಫೆಬ್ರುವರಿ 2026, 16:25 IST
Last Updated 12 ಫೆಬ್ರುವರಿ 2026, 16:25 IST
   

ನವದೆಹಲಿ: ಕೈಗಾರಿಕಾ ಸಂಬಂಧ ಸಂಹಿತೆ (ತಿದ್ದುಪಡಿ) ಮಸೂದೆ– 2026 ಅನ್ನು ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಅಂಗೀಕಾರವಾಯಿತು. 

2020ರ ಕೈಗಾರಿಕಾ ಸಂಬಂಧ ಸಂಹಿತೆಯಿಂದ ಬದಲಾಯಿಸಲಾದ ಕೆಲ ಕಾನೂನುಗಳ ನಿರಂತರತೆ ಕುರಿತು ಭವಿಷ್ಯದಲ್ಲಿ ಅನಗತ್ಯ ತೊಡಕುಗಳು ಉಂಟಾಗುವುದನ್ನು ತಪ್ಪಿಸಲು ಈ ಮಸೂದೆ ನೆರವಾಗುತ್ತದೆ ಎಂದು ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ತಿಳಿಸಿದರು. 

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಈ ಮಸೂದೆ ಅಂಗೀಕಾರವಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.