ADVERTISEMENT

ರಾಜ್ಯಸಭೆಯು ದೂರದೃಷ್ಟಿತ್ವ ಇರುವ ಮೇಲ್ಮನೆ: 250ನೇ ಅಧಿವೇಶನದಲ್ಲಿ ಪ್ರಧಾನಿ ಮೋದಿ

ಏಜೆನ್ಸೀಸ್
Published 18 ನವೆಂಬರ್ 2019, 9:48 IST
Last Updated 18 ನವೆಂಬರ್ 2019, 9:48 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ:ರಾಜ್ಯಸಭೆಯು ದೂರದೃಷ್ಟಿತ್ವ ಉಳ್ಳ ಮೇಲ್ಮನೆಯಾಗಿದ್ದು ಬೌದ್ಧಿಕ ಶ್ರೀಮಂತಿಕೆಯನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಜ್ಯಸಭೆಯ 250ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯಸಭೆಯು ಹಲವು ಇತಿಹಾಸಗಳನ್ನು ನಿರ್ಮಿಸಿದೆ. ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅನೇಕ ಧೀಮಂತ ನಾಯಕರನ್ನು ಕಂಡಿದೆ. ರಾಜ್ಯಸಭೆಯು ಲೋಕಸಭೆಯಂತಲ್ಲ. ಮೇಲ್ಮನೆಯನ್ನು ಅದಕ್ಕಿಂತ ಹೊರತಾಗಿ ನೋಡಬಹುದು’ ಎಂದು ಹೇಳಿದರು.

ಈ ಸದನವು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. 250ನೇ ಅಧಿವೇಶನದ ವೇಳೆ ಇದರ ಭಾಗವಾಗಿರುವುದು ನನಗೆ ದೊರೆತ ಗೌರವ ಎಂದು ಮೋದಿ ಹೇಳಿದರು.

ADVERTISEMENT

ಸಂವಿಧಾನದ 375ನೇ ವಿಧಿ ಮತ್ತು 35(ಎ) ರದ್ದುಪಡಿಸಿದ ದಿನ ಮರೆಯಲು ಸಾಧ್ಯವಿಲ್ಲ. ಆ ದಿನ ರಾಜ್ಯಸಭೆಯು ದೇಶದ ಏಕತೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿತು ಎಂದಿ ಪ್ರಧಾನಿ ಹೇಳಿದರು.

1952ರ ಮೇ 13ರಂದು ಮೊದಲ ಅಧಿವೇಶನ ನಡೆಸಿದ್ದ ರಾಜ್ಯಸಭೆಗೆ, ಇಂದು ಆರಂಭವಾಗಿರುವ ಅಧಿವೇಶನ 250ನೇಯದ್ದಾಗಿದೆ.

ಸಂಸತ್ತಿನ ಉಭಯ ಸದನಗಳ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಲೋಕಸಭೆಯಲ್ಲಿಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಕಲಾಪದಿಂದ ಹೊರನಡೆದು ಪ್ರತಿಭಟಿಸಿವೆ.ಜಮ್ಮು–ಕಾಶ್ಮೀರದಲ್ಲಿನ ನಿರ್ಬಂಧ ಹೇರಿಕೆ ಮತ್ತು ನಾಯಕರ ಬಂಧನವನ್ನು ಪ್ರಶ್ನಿಸಿ ಉಭಯ ಪಕ್ಷಗಳು ಕಲಾಪ ಬಹಿಷ್ಕರಿಸಿವೆ. ಇದಕ್ಕೂ ಮುನ್ನಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟ ವಿಷಯ ಪ್ರಸ್ತಾಪಿಸಿ ಶಿವಸೇನಾ ಸಂಸದರು ಕಲಾಪದಿಂದ ಹೊರನಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.