ADVERTISEMENT

ಪೇಟೆಂಟ್ ಉಲ್ಲಂಘನೆ: ₹2 ಕೋಟಿ ಪರಿಹಾರ ನೀಡಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:33 IST
Last Updated 4 ಫೆಬ್ರುವರಿ 2023, 15:33 IST
.
.   

ನವದೆಹಲಿ: ‌ಉದ್ದೇಶಪೂರ್ವಕವಾಗಿ ನ್ಯಾಯಾಂಗ ನಿಂದನೆ ಮಾಡಿದ ಕಾರಣ ₹2 ಕೋಟಿಗಳನ್ನು ನಷ್ಟದ ಪರಿಹಾರವಾಗಿ ಫಾರ್ಮಾ ಕಂಪನಿ ಫೈಜರ್‌ ಇಂಕ್‌ಗೆ ಪಾವತಿಸುವಂತೆ ದೆಹಲಿ ಹೈಕೋರ್ಟ್ ತ್ರಿವೇಣಿ ಇಂಟರ್‌ಕೆಮ್ ಪ್ರೈವೇಟ್ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.

ಎರಡು ವಾರಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ಸಂಸ್ಥೆ ನಿರ್ದೇಶಕರನ್ನು ವಶಕ್ಕೆ ತೆಗೆದುಕೊಂಡು, ತಿಹಾರ್ ಜೈಲಿನಲ್ಲಿ ಎರಡು ವಾರಗಳ ಕಾಲ ಇರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಫೈಜರ್‌ನ ಪೇಟೆಂಟ್ ಅನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕಾಗಿ ಸಂಸ್ಥೆಯು ‘ಪಾಲ್ಬೋಸಿಕ್ಲಿಬ್’ ಅಥವಾ ಯಾವುದೇ ಔಷಧೀಯವಾಗಿ ಉಪ್ಪನ್ನು ಹೊಂದಿರುವ ಉತ್ಪನ್ನ ತಯಾರಿಸುವುದು, ಮಾರಾಟ, ವಿತರಣೆ, ಜಾಹೀರಾತು ಮಾಡುವುದು, ರಫ್ತು ಅಥವಾ ಆಮದು ಮಾಡಿಕೊಳ್ಳುವುದು ಅಥವಾ ವ್ಯವಹರಿಸುವುದನ್ನು ನಿರ್ಬಂಧಿಸಿತ್ತು.

ADVERTISEMENT

ಕಂಪನಿಯು ಪಾಲ್ಬೋಸಿಕ್ಲಿಬ್ ಮಾರಾಟ ಮಾಡುವುದು ಮುಂದುವರಿಸುತ್ತಿರುವ ಕಾರಣ ಪ್ರತಿವಾದಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.