ADVERTISEMENT

ಪೆಗಾಸಸ್: ಎಲ್ಗಾರ್ ಪ್ರಕರಣದ 7 ಆರೋಪಿಗಳ ಮೊಬೈಲ್‌ ಒಪ್ಪಿಸಲು ಎನ್‌ಐಎಗೆ ಅನುಮತಿ

ಪಿಟಿಐ
Published 8 ಫೆಬ್ರುವರಿ 2022, 12:23 IST
Last Updated 8 ಫೆಬ್ರುವರಿ 2022, 12:23 IST
court
court   

ಮುಂಬೈ: ಎಲ್ಗಾರ್‌ ಪರಿಷದ್–ಮಾವೊವಾದಿಗಳ ಸಂಪರ್ಕ ಪ್ರಕರಣದ ಏಳು ಜನ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ಪೆಗಾಸಸ್‌ ಕುತಂತ್ರಾಂಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ತಾಂತ್ರಿಕ ಸಮಿತಿಗೆ ಒಪ್ಪಿಸಲುರಾಷ್ಟ್ರೀಯ ತನಿಖಾ ಸಂಸ್ಥೆಗೆ ( ಎನ್‌ಐಎ) ವಿಶೇಷ ಎನ್ಐಎ ಕೋರ್ಟ್‌ ಮಂಗಳವಾರ ಅನುಮತಿ ನೀಡಿತು.

‘ಈ ಮೊಬೈಲ್‌ಗಳನ್ನು ತನಗೆ ಒಪ್ಪಿಸುವಂತೆ ಸುಪ್ರೀಂಕೋರ್ಟ್‌ ನೇಮಿಸಿರುವ ತಾಂತ್ರಿಕ ಸಮಿತಿಯು ಎನ್‌ಐಎಗೆ ಸೂಚಿಸಿತ್ತು. ಈ ಮೊಬೈಲ್‌ ಫೋನ್‌ಗಳು ವಿಶೇಷ ಎನ್‌ಐಎ ಕೋರ್ಟ್‌ ವಶದಲ್ಲಿದ್ದ ಕಾರಣ, ಎನ್‌ಐಎ ಅಧಿಕಾರಿಗಳು ಅನುಮತಿ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು’ ಎಂದು ಎಲ್ಗಾರ್‌ ಪರಿಷದ್‌ ಪ್ರಕರಣದ ಆರೋಪಿಯೊಬ್ಬರ ಪರ ವಕೀಲರು ತಿಳಿಸಿದ್ದಾರೆ.

ಎನ್‌ಐಎ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಎನ್‌ಐಎ ಕೋರ್ಟ್‌ ನ್ಯಾಯಾಧೀಶ ಡಿ.ಇ.ಕೋಥಳೀಕರ್ ಅವರು, ಮೊಬೈಲ್‌ಗಳನ್ನು ಸಮಿತಿಗೆ ಒಪ್ಪಿಸಲು ಅನುಮತಿ ನೀಡಿದರು.

ADVERTISEMENT

ತಮ್ಮ ಮೊಬೈಲ್‌ ಫೋನ್‌ಗಳೂ ಪೆಗಾಸಸ್ ಗೂಢಚಾರಿಕೆ ತಂತ್ರಾಂಶದಿಂದ ಬಾಧಿತವಾಗಿವೆ ಎಂದು ಆರೋಪಿಸಿರುವ ಈ ಏಳು ಜನ ಆರೋಪಿಗಳು, ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ಸಮಿತಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.