ADVERTISEMENT

ಸರ್ಕಾರಿ ನೌಕರರ ಪಿಂಚಣಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:05 IST
Last Updated 23 ಸೆಪ್ಟೆಂಬರ್ 2019, 19:05 IST
   

ನವದೆಹಲಿ: ಸರ್ಕಾರಿ ನೌಕರ ಏಳು ವರ್ಷಗಳ ಸೇವಾವಧಿ ಮುಗಿಯುವ ಮೊದಲೇ ಮೃತಪಟ್ಟಲ್ಲಿ, ಅವರ ಕುಟುಂಬಕ್ಕೆ 10 ವರ್ಷ ಕಾಲ ನೌಕರನ ಕಡೆಯ ವೇತನದ ಶೇ 50ರಷ್ಟು ಪಿಂಚಣಿಯಾಗಿ ದೊರೆಯಲಿದೆ.

ಇದುವರೆಗೂ ಇಂಥ ಪ್ರಕರಣಗಳಲ್ಲಿ ಪಿಂಚಣಿಯಾಗಿ ಶೇ 30ರಷ್ಟು ನೀಡಲಾಗುತ್ತಿತ್ತು. ಏಳು ವರ್ಷ ಕಾಲ ಸೇವೆ ಮುಗಿದಿದ್ದರೆ ಮಾತ್ರ ಶೇ 50ರಷ್ಟು ಸಿಗುತ್ತಿತ್ತು. 10 ವರ್ಷದ ಬಳಿಕ ಈ ಪ್ರಮಾಣ ಶೇ 30 ಆಗಲಿದೆ.

ಕೇಂದ್ರ ನಾಗರಿಕ ಸೇವೆ (ಪಿಂಚಣಿ) ನಿಯಮಗಳು 1972ಕ್ಕೆ ಸರ್ಕಾರ ತಿದ್ದುಪಡಿ ಮಾಡಿದೆ. ಪರಿಷ್ಕೃತ ಆದೇಶ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ.

ADVERTISEMENT

ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಅಹವಾಲು, ಪಿಂಚಣಿ ಸಚಿವಾಲಯವು ‘ಸೇವೆ ಆರಂಭದ ವರ್ಷಗಳಲ್ಲಿ ವೇತನ ಕಡಿಮೆ ಇರಲಿದೆ. ಅಕಾಲಿಕ ಮೃತ್ಯು ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗಲು ಈ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.