ADVERTISEMENT

ಮಣಿಪುರ ಬಿಕ್ಕಟ್ಟು–ಶಾಶ್ವತ ಪರಿಹಾರಕ್ಕೆ ಸಮಯ ಬೇಕು: ಬಿರೇನ್‌ ಸಿಂಗ್‌

ಪಿಟಿಐ
Published 12 ಡಿಸೆಂಬರ್ 2024, 13:31 IST
Last Updated 12 ಡಿಸೆಂಬರ್ 2024, 13:31 IST
ಬಿರೇನ್‌ ಸಿಂಗ್‌
ಬಿರೇನ್‌ ಸಿಂಗ್‌   

ಇಂಫಾಲ್‌: ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ತಿಳಿಸಿದ್ದಾರೆ.

ನೂಪಿ ಲ್ಯಾನ್ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೊಲೀಸ್‌ ಠಾಣೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಮರು ಹೇರಿಕೆಯನ್ನು ವಾಪಸ್‌ ಪಡೆಯುವ ಹಾಗೂ ಅದರ ಬಗ್ಗೆ ಪರಾಮರ್ಶೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳಲಾಗಿದೆ. ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ಮರುಸ್ಥಾಪಿಸುವ ಸರ್ಕಾರದ ಪ್ರಯತ್ನಕ್ಕೆ ಸಾರ್ವಜನಿಕರಿಂದ ಸಹಕಾರ ಮತ್ತು ಬೆಂಬಲ ಬೇಕು’ ಎಂದರು.  

ಬ್ರಿಟಿಷ್ ವಸಾಹತುಶಾಹಿ ಅನ್ಯಾಯದ ವಿರುದ್ಧ 1904 ಮತ್ತು 1939ರಲ್ಲಿ ಮಣಿಪುರದ ಮಹಿಳೆಯರು ಹೋರಾಡಿದ್ದನ್ನು ನೆನಪಿಟ್ಟುಕೊಳ್ಳಲು ನೂಪಿ ಲಾಲ್ ನುಮಿತ್ ಅವರನ್ನು ವಾರ್ಷಿಕವಾಗಿ ಸ್ಮರಿಸಲಾಗುತ್ತಿದೆ ಎಂದು ಬಿರೇನ್ ಸಿಂಗ್ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.