ಮುಂಬೈ: ಶಂಕಿತ 'ಗಿಲ್ಲೈನ್ ಬರ್ರೆ ಸಿಂಡ್ರೋಮ್'ಗೆ (ಜಿಬಿಎಸ್) ಒಳಗಾಗಿದ್ದ ವ್ಯಕ್ತಿಯೊಬ್ಬರು ಸೋಲಾಪುರದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಸೋಮವಾರ ತಿಳಿಸಿದ್ದಾರೆ.
ಇದು ಶಂಕಿತ ಜಿಬಿಎಸ್‌ನಿಂದ ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜಿಬಿಎಸ್ ಎಂಬುದು, ರೋಗಿಯ ಪ್ರತಿಕಾಯ ಸಾಮರ್ಥ್ಯವನ್ನು ಕುಗ್ಗಿಸುವ ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕಿನಿಂದ ಬರುವ ನರ ಸಂಬಂಧಿ ಅನಾರೋಗ್ಯವಾಗಿದೆ. ಇದು ಅಪರೂಪದ ಕಾಯಿಲೆಯಾಗಿದ್ದು, ದೇಹವು ಹಠಾತ್ತನೆ ಮರಗಟ್ಟುವಂತೆ ಮಾಡಿ, ಕೈ–ಕಾಲು ಹಾಗೂ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಪುಣೆಯಲ್ಲಿ ಶಂಕಿತ ಜಿಬಿಎಸ್ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.