ADVERTISEMENT

ದೆಹಲಿ: ಪ್ರತಿ ಲೀಟರ್‌ಗೆ ₹100 ದಾಟಿದ ಪೆಟ್ರೋಲ್‌ ದರ

ಪಿಟಿಐ
Published 7 ಜುಲೈ 2021, 5:41 IST
Last Updated 7 ಜುಲೈ 2021, 5:41 IST
.ಸಾಂದರ್ಭಿಕ ಚಿತ್ರ
.ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 35 ಪೈಸೆ ಹಾಗೂ ಡೀಸೆಲ್‌ ದರ ಪ್ರತಿ ಲೀಟರ್‌ಗೆ 23 ಪೈಸೆಯಷ್ಟು ಹೆಚ್ಚಾಗಿದೆ.

ಇದರಿಂದಾಗಿ,ದೆಹಲಿಯಲ್ಲಿ ಪೆಟ್ರೊಲ್‌ ದರ ಪ್ರತಿ ಲೀಟರ್‌ಗೆ ₹100.21 ಮತ್ತು ಡೀಸೆಲ್‌ ದರ ಪ್ರತಿ ಲೀಟರ್‌ ₹89.53ಕ್ಕೆ ನಿಗದಿಯಾಗಿದೆ.

ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಈಗಾಗಲೇ ಈ ತೈಲ ಬೆಲೆಗಳು ₹100 ದಾಟಿವೆ. ಕೋಲ್ಕತ್ತದಲ್ಲಿ ಬುಧವಾರ ₹100 ದಾಟಿತ್ತು. ಈಗ ದೆಹಲಿಯಲ್ಲೂ ₹100 ದಾಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.