ADVERTISEMENT

ಚೆನ್ನೈಯಲ್ಲಿ ಏಷ್ಯಾದ ಮೊದಲ ಜಾಗತಿಕ ಔಷಧ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಫೈಜರ್

ಪಿಟಿಐ
Published 4 ಮೇ 2022, 14:11 IST
Last Updated 4 ಮೇ 2022, 14:11 IST
ಸಾಂದರ್ಭಿಕ ಚಿತ್ರ – ಐಎಎನ್‌ಎಸ್
ಸಾಂದರ್ಭಿಕ ಚಿತ್ರ – ಐಎಎನ್‌ಎಸ್   

ಚೆನ್ನೈ: ಅಮೆರಿಕದ ಬಹುರಾಷ್ಟ್ರೀಯ ಔಷಧ ತಯಾರಕ ಕಂಪನಿ ಫೈಜರ್, ಏಷ್ಯಾದ ಮೊದಲ ಜಾಗತಿಕ ಔಷಧ ಅಭಿವೃದ್ಧಿ ಕೇಂದ್ರವನ್ನು ಚೆನ್ನೈಯಲ್ಲಿ ಸ್ಥಾಪಿಸಿದೆ. ಐಐಟಿ ಮದ್ರಾಸ್‌ನ ರಿಸರ್ಚ್‌ ಪಾರ್ಕ್‌ನಲ್ಲಿ ₹150 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ.

ಈ ಕೇಂದ್ರದಲ್ಲಿ 250 ವಿಜ್ಞಾನಿಗಳು, ತಂತ್ರಜ್ಞರು ಕೆಲಸ ಮಾಡಲಿದ್ದು, ಹೊಸ ಔಷಧಗಳು, ‘ಸಕ್ರಿಯ ಔಷಧೀಯ ಪದಾರ್ಥ’ಗಳನ್ನು (ಎಪಿಐಎಸ್) ಅಭಿವೃದ್ಧಿಪಡಿಸಲಿದ್ದಾರೆ

ಈ ಕೇಂದ್ರವು ಜಾಗತಿಕ ಮಾರುಕಟ್ಟೆಗಳಿಗೆ ಔಷಧವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಫೈಜರ್‌ನ ಉತ್ಪಾದನಾ ಕೇಂದ್ರಗಳಿಗೂ ನೆರವಾಗಲಿದೆ. ಇದು ವಿಶ್ವದಾದ್ಯಂತ ಸ್ಥಾಪಿಸಲಾಗಿರುವ 12 ಕೇಂದ್ರಗಳಲ್ಲಿ ಒಂದಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.