ADVERTISEMENT

ಕೋವಿಡ್ ಲಸಿಕೆ ಬದಲಿಗೆ ರೇಬಿಸ್‌ ತಡೆ ಚುಚ್ಚು ಮದ್ದು: ಫಾರ್ಮಾಸಿಸ್ಟ್‌ ವಜಾ

ಉತ್ತರ ಪ್ರದೇಶದ ಮುಜಾಫ್ಫರ್‌ನಗರ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದ್ದ ಘಟನೆ

ಪಿಟಿಐ
Published 15 ಏಪ್ರಿಲ್ 2021, 8:06 IST
Last Updated 15 ಏಪ್ರಿಲ್ 2021, 8:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಜಾಫ್ಫರ್‌ನಗರ: ಮೂವರು ಮಹಿಳೆಯರಿಗೆ ಕೋವಿಡ್‌ ಲಸಿಕೆ ಬದಲಿಗೆ ರೇಬಿಸ್‌ ನಿರೋಧಕ ಚುಚ್ಚು ಮದ್ದು ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಾಸಿಸ್ಟ್‌ ಅವರನ್ನು ವಜಾ ಮಾಡಿದ್ದು, ಮತ್ತೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಜಸ್ಜಿತ್ ಕೌರ್ ಅವರು ಬುಧವಾರ ಹೊರಡಿಸಿರುವ ಈ ಆದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ರಮ್‌ಬೀರ್‌ ಸಿಂಗ್‌ ಅವರನ್ನು ವರ್ಗಾವಣೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.

ಉಪ ವಿಭಾಗಾಧಿಕಾರಿ ಉದವ್ ತ್ರಿಪಾಠಿ ಸಲ್ಲಿಸಿದ ವಿಚಾರಣಾ ವರದಿಯ ಆಧಾರದ ಮೇಲೆ ವೈದ್ಯಕೀಯ ಸಿಬ್ಬಂದಿ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ.

ADVERTISEMENT

ಕಳೆದ ವಾರ ಸರೋಜ್ (70), ಅನಾರ್ಕಲಿ (72) ಮತ್ತು ಸತ್ಯವತಿ (60) ಎಂಬ ಮೂವರು ಮಹಿಳೆಯರು ಕೋವಿಡ್‌ಗೆ ಲಸಿಕೆ ಪಡೆಯಲು ಕಾಂಧ್ಲಾದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಆಗ ಕೋವಿಡ್‌ ಲಸಿಕೆ ಬದಲು ರೇಬಿಸ್ ತಡೆ ಲಸಿಕೆಯನ್ನು ಈ ಮಹಿಳೆಯರಿಗೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.