ADVERTISEMENT

ಎಂಜಿನಿಯರಿಂಗ್: ಭೌತ, ರಸಾಯನ ವಿಜ್ಞಾನ ಮತ್ತು ಗಣಿತ ಪ್ರಮುಖ ವಿಷಯ: ಎಐಸಿಟಿಇ

ಪಿಟಿಐ
Published 12 ಮಾರ್ಚ್ 2021, 21:58 IST
Last Updated 12 ಮಾರ್ಚ್ 2021, 21:58 IST
ಅನಿಲ್ ಸಹಸ್ರಬುದ್ಧೆ
ಅನಿಲ್ ಸಹಸ್ರಬುದ್ಧೆ    

ನವದೆಹಲಿ: ‘ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ಪ್ರಮುಖ ವಿಷಯವಾಗಿ ಮುಂದುವರಿಯುತ್ತವೆ’ ಎಂದು ಎಐಸಿಟಿಇ ತಿಳಿಸಿದೆ.

ಆದರೆ, 12ನೇ ತರಗತಿಯಲ್ಲಿ ಈ ವಿಷಯಗಳನ್ನು ಅಧ್ಯಯನ ಮಾಡದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಈ ವಿಷಯಗಳನ್ನು ತೆಗೆದುಕೊಳ್ಳುವುದು ಕಡ್ಡಾಯವೇನಲ್ಲ ಎಂದು ಎಐಸಿಟಿಯ ಶುಕ್ರವಾರ ಹೇಳಿದೆ.

ದ್ವಿತೀಯ ಪಿಯುಸಿಯಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಗಣಿತ ವಿಷಯ ಓದದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ನಲ್ಲಿ ಜೈವಿಕ ವಿಜ್ಞಾನ, ಜವಳಿ ಮತ್ತು ಕೃಷಿ ಎಂಜಿನಿಯರಿಂಗ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಎಐಸಿಟಿಇ ಮುಖ್ಯಸ್ಥ ಅನಿಲ್ ಸಹಸ್ರಬುದ್ಧೆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.