ADVERTISEMENT

ಕಮಲ್‌ ಹಾಸನ್‌ ಚಿತ್ರ ಪ್ರದರ್ಶನ ‘ನಿಷೇಧ’ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ PIL

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:20 IST
Last Updated 7 ಜೂನ್ 2025, 16:20 IST
–
   

ನವದೆಹಲಿ: ಕಮಲ್‌ ಹಾಸನ್‌ ನಟನೆಯ ‘ಥಗ್‌ ಲೈಫ್’ ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.

‘ಈ ಚಿತ್ರವನ್ನು ಸಿಬಿಎಫ್‌ಸಿ ಪ್ರಮಾಣೀಕರಿಸಿದೆ. ಆದರೆ, ಕೆಲ ಸಂಘಟನೆಗಳು ಹಿಂಸಾಚಾರದ ಬೆದರಿಕೆ ಒಡ್ಡಿವೆ. ಈ ಕಾರಣಕ್ಕೆ ಚಿತ್ರ ಪ್ರದರ್ಶನದ ಮೇಲೆ ವಸ್ತುತಃ ನಿಷೇಧ ಹೇರಿದಂತಾಗಿದೆ’ ಎಂದು ಆರೋಪಿಸಿ ಬೆಂಗಳೂರಿನ ಎಂ.ಮಹೇಶ ರೆಡ್ಡಿ ಪಿಐಎಲ್‌ ಸಲ್ಲಿಸಿದ್ದಾರೆ.

‘ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಸಂವಿಧಾನದ 14, 19(1)(ಎ), 19(1)(ಜಿ) ಹಾಗೂ 21ನೇ ವಿಧಿಗಳ ಉಲ್ಲಂಘನೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.