ADVERTISEMENT

ತಮಿಳುನಾಡು ಉಸ್ತುವಾರಿಯಾಗಿ ಸಚಿವ ಪೀಯೂಷ್ ಗೋಯಲ್ ನೇಮಕ

ಪಿಟಿಐ
Published 15 ಡಿಸೆಂಬರ್ 2025, 15:57 IST
Last Updated 15 ಡಿಸೆಂಬರ್ 2025, 15:57 IST
   

ಚೆನ್ನೈ: ಪಕ್ಷದ ಮುಂದಿನ ಗುರಿ ತಮಿಳುನಾಡು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ ಮರುದಿನವೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರನ್ನು ತಮಿಳುನಾಡಿನ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಎಐಎಡಿಎಂಕೆ ಬಂಡಾಯ ನಾಯಕರಾದ ಒ.ಪನ್ನೀರಸೆಲ್ವಂ ಹಾಗೂ ಟಿಟಿವಿ ದಿನಕರನ್‌ ಅವರನ್ನು ಎನ್‌ಡಿಎ ಮೈತ್ರಿಕೂಟದ ಒಳಗಡೆ ಸೇರಿಸಲು ಬಿಜೆಪಿ ತನ್ನ ಕಾರ್ಯತಂತ್ರವನ್ನು ಬಿರುಸುಗೊಳಿಸಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನೈನಾರ್‌ ನಾಗೇಂದ್ರನ್‌ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇತ್ತೀಚಿಗೆ ವಿಸ್ತೃತ ಸಭೆ ನಡೆಸಿದ್ದರು. ಇದಾದ ಬಳಿಕ ಪೀಯೂಷ್‌ ಗೋಯಲ್ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ.

ADVERTISEMENT

ರಾಜ್ಯ ಸಚಿವರಾದ ಅರ್ಜುನ್‌ ಮೇಘವಾಲ್‌ ಮುರಳೀಧರ್‌ ಮಾಹೊಲ್‌ ಅವರನ್ನು ಸಹ ಉಸ್ತುವಾರಿಗಳಾಗಿ ನೇಮಿಸಲಾಗಿದೆ.

2019ರಲ್ಲಿಯೂ ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವಲ್ಲಿ ಪೀಯೂಷ್‌ ಅವರು ಪ್ರಮುಖ ಪಾತ್ರ ವಹಿಸಿದ್ದು ಪಳನಿಸ್ವಾಮಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರ ಬಂದಾಗ ಕಠಿಣ ಸಂಧಾನಕಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.