ADVERTISEMENT

'ಒಂದೇ ಧರ್ಮದ ಎರಡು ಪಂಗಡದ ನಡುವಣ ವ್ಯಾಜ್ಯದಲ್ಲಿ ಪೂಜಾ ಸ್ಥಳ ಕಾಯ್ದೆ ಅನ್ವಯಿಸದು'

ಪಿಟಿಐ
Published 30 ಜುಲೈ 2022, 15:09 IST
Last Updated 30 ಜುಲೈ 2022, 15:09 IST
   

ನವದೆಹಲಿ:‘ಒಂದೇ ಧರ್ಮದ ಎರಡು ಪಂಗಡಗಳ ನಡುವಣ ವ್ಯಾಜ್ಯದ ಸಂದರ್ಭದಲ್ಲಿ 1991ರ ಪೂಜಾ ಸ್ಥಳ ಕಾಯ್ದೆ ಅನ್ವಯಿಸಲು ಆಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಶನಿವಾರ ಹೇಳಿದೆ.

ಶ್ವೇತಾಂಬರ ಮೂರ್ತಿಪೂಜಕ್‌ ಜೈನ್‌ ಸಮುದಾಯಕ್ಕೆ ಸೇರಿದ ತಪಗಚ್‌ ಪಂಗಡದ ಮೋಹಿಜಿತ್‌ ಸಮುದೆ ಅವರ ಅನುಯಾಯಿ ಶರದ್‌ ಜವೇರಿ ಹಾಗೂ ಇತರರು 1991ರ ಪೂಜಾ ಸ್ಥಳ ಕಾಯ್ದೆ ಜಾರಿಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠವು ಶನಿವಾರ ಇದರ ವಿಚಾರಣೆ ನಡೆಸಿತು.

ತಪಗಚ್‌ ಅನುಯಾಯಿಗಳು ಪ್ರಾರ್ಥನೆ ಹಾಗೂ ಪೂಜೆ ನಡೆಸುವ ಸ್ಥಳಗಳು ಸನ್ಯಾಸಿಗಳು ಸೇರಿದಂತೆ ಸಮುದಾಯದ ಇತರರಿಗೂ ಮುಕ್ತವಾಗಿರಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.