ADVERTISEMENT

ಪಿಎಂ ಕೇರ್ಸ್ ಫಂಡ್: 2020-21ರ ಹಣಕಾಸು ವರ್ಷದಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳ

ಪಿಟಿಐ
Published 8 ಫೆಬ್ರುವರಿ 2022, 3:01 IST
Last Updated 8 ಫೆಬ್ರುವರಿ 2022, 3:01 IST
   

ನವದೆಹಲಿ: ಕೋವಿಡ್ ಸಾಂಕ್ರಾಮಿಕದಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸ್ಥಾಪಿಸಲಾದ ಪಿಎಂ ಕೇರ್ಸ್ ಫಂಡ್, 2020-21ರ ಹಣಕಾಸು ವರ್ಷದಲ್ಲಿ ಸುಮಾರು ಮೂರು ಪಟ್ಟು ಬೆಳೆದು ₹ 10,990 ಕೋಟಿಗೆ ತಲುಪಿದೆ. ಇದೇವೇಳೆ, ಇತ್ತೀಚಿನ ಲೆಕ್ಕ ಪರಿಶೋಧನೆಯ ಪ್ರಕಾರ ವಿತರಣೆಯು ₹ 3,976 ಕೋಟಿಗೆ ಏರಿದೆ.

ವಲಸಿಗರ ಕಲ್ಯಾಣಕ್ಕಾಗಿ ₹ 1,000 ಕೋಟಿ ಮತ್ತು ಕೋವಿಡ್ ಲಸಿಕೆ ಡೋಸ್‌ಗಳ ಸಂಗ್ರಹಣೆಗಾಗಿ ₹ 1,392 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಈ ನಿಧಿಗೆ ಸುಮಾರು ₹ 494.91 ಕೋಟಿ ವಿದೇಶಿ ಕೊಡುಗೆಯಾಗಿ ಮತ್ತು ₹ 7,183 ಕೋಟಿಗಳಿಗಿಂತ ಹೆಚ್ಚು ಸ್ವಯಂಪ್ರೇರಿತ ಕೊಡುಗೆಯಾಗಿ ಬಂದಿದೆ.

ADVERTISEMENT

2019-20 ರಲ್ಲಿ ಒಟ್ಟಾರೆ ₹3,076.62 ಕೋಟಿಗಳಷ್ಟು ದೇಣಿಗೆ ಹರಿದು ಬಂದಿದೆ. ಇದು ಮಾರ್ಚ್ 27, 2020 ರಂದು ಸ್ಥಾಪನೆಯಾದ ಈ ನಿಧಿಯು ಕೇವಲ ಐದು ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತದ ದೇಣಿಗೆ ಸ್ವೀಕರಿಸಿತ್ತು.

'ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)' ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ವಿವರಗಳ ಪ್ರಕಾರ, ಇದು ‘ಸಂಪೂರ್ಣವಾಗಿ ವ್ಯಕ್ತಿಗಳು/ಸಂಸ್ಥೆಗಳಿಂದ ಸ್ವಯಂಪ್ರೇರಿತ ಕೊಡುಗೆಗಳನ್ನು ಒಳಗೊಂಡಿದೆ ಮತ್ತು ಯಾವುದೇ ಬಜೆಟ್ ಬೆಂಬಲವನ್ನು ಪಡೆಯುವುದಿಲ್ಲ’ಎಂದು ತಿಳಿಸಲಾಗಿದೆ..

ಪಿಎಂ ಕೇರ್ಸ್ ನಿಧಿಯನ್ನು ಟೀಕಿಸಿರುವ ವಿಪಕ್ಷಗಳು ನಿಧಿಯ ಕೊಡುಗೆಗಳು ಮತ್ತು ವೆಚ್ಚಗಳು ಪಾರದರ್ಶಕವಾಗಿಲ್ಲ ಎಂದು ಹೇಳಿಕೊಂಡಿವೆ. ಇದನ್ನು ಸರ್ಕಾರವು ನಿರಾಕರಿಸಿದೆ.

ಇತ್ತೀಚಿನ ಲೆಕ್ಕಪರಿಶೋಧನೆಯ ಹೇಳಿಕೆಯ ಪ್ರಕಾರ, 9 ರಾಜ್ಯಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 50,000 ಭಾರತದಲ್ಲಿ ತಯಾರಿಸಿದ ವೆಂಟಿಲೇಟರ್‌ಗಳಿಗೆ 1,311 ಕೋಟಿ ರೂ., ಮುಜಫರ್‌ಪುರ ಮತ್ತು ಪಾಟ್ನಾದಲ್ಲಿ ಎರಡು 500 ಹಾಸಿಗೆಗಳ ಕೋವಿಡ್ ಆಸ್ಪತ್ರೆಗಳ ಸ್ಥಾಪನೆಗೆ 50 ಕೋಟಿ ಮತ್ತು 16 ಆರ್‌ಟಿ-ಪಿಸಿಆರ್ ಪರೀಕ್ಷಾ ಪ್ರಯೋಗಾಲಯಗಳಿಗೆ ಹಣ ವಿತರಿಸಿದೆ.

ಇದಲ್ಲದೆ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿನ ಆಮ್ಲಜನಕ ಘಟಕಗಳಿಗೆ 201.58 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಆದರೆ ಕೋವಿಡ್ ಲಸಿಕೆಗಳ ಮೇಲೆ ಕೆಲಸ ಮಾಡುವ ಲ್ಯಾಬ್‌ಗಳ ಉನ್ನತೀಕರಣಕ್ಕಾಗಿ 20.4 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.

ವಲಸಿಗರ ಕಲ್ಯಾಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,000 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರೆ, 6.6 ಕೋಟಿ ಡೋಸ್ ಕೋವಿಡ್ ಲಸಿಕೆಗಳ ಖರೀದಿಗೆ 1,392.82 ಕೋಟಿ ರೂ.ವಿತರಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.