ADVERTISEMENT

ದ್ವಿಪಕ್ಷೀಯ ಸಹಕಾರ: ಮೋದಿ–ಪುಟಿನ್‌ ಮಾತುಕತೆ

ಪಿಟಿಐ
Published 16 ಡಿಸೆಂಬರ್ 2022, 15:53 IST
Last Updated 16 ಡಿಸೆಂಬರ್ 2022, 15:53 IST
ವ್ಲಾಡಿಮಿರ್‌ ಪುಟಿನ್‌ ಮತ್ತು ನರೇಂದ್ರ ಮೋದಿ 
ವ್ಲಾಡಿಮಿರ್‌ ಪುಟಿನ್‌ ಮತ್ತು ನರೇಂದ್ರ ಮೋದಿ    

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು,‌ ಇಂಧನ, ವ್ಯಾಪಾರ, ರಕ್ಷಣೆ ಹಾಗೂ ಭದ್ರತೆ ಸೇರಿದಂತೆ ಇತರೆ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಕೋರಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಭಾರತವು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿರುವ ಕುರಿತು ಪುಟಿನ್‌ ಜೊತೆ ಚರ್ಚಿಸಿರುವ ಮೋದಿ ಅವರು ಭಾರತದ ಪ್ರಮುಖ ಆದ್ಯತೆಗಳ ಕುರಿತು ರಷ್ಯಾ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ’ ಎಂದೂ ತಿಳಿಸಿದ್ದಾರೆ.

ಭಾರತ–ರಷ್ಯಾ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮೋದಿ ಅವರು ರಷ್ಯಾಕ್ಕೆ ತೆರಳುವುದಿಲ್ಲ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಈ ಮಾತುಕತೆ ನಡೆದಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಕಳೆದ ವರ್ಷ ಪುಟಿನ್‌ ಭಾರತಕ್ಕೆ ಬಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.