ADVERTISEMENT

ಪಕ್ಷದ ವಿಚಾರಗಳಲ್ಲಿ ನಿತಿನ್ ನಬಿನ್‌ ನನಗೂ ಬಾಸ್‌; ಪ್ರಧಾನಿ ಮೋದಿ

ಏಜೆನ್ಸೀಸ್
Published 20 ಜನವರಿ 2026, 8:01 IST
Last Updated 20 ಜನವರಿ 2026, 8:01 IST
<div class="paragraphs"><p> ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು</p></div>

ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು

   

ನವದೆಹಲಿ: ನಾನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ, ಪಕ್ಷದ ವಿಚಾರಗಳಲ್ಲಿ ನಿತಿನ್ ನಬಿನ್‌ ನನಗೂ ಬಾಸ್‌ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅಧಿಕಾರ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ADVERTISEMENT

ನಿತಿನ್ ನಬಿನ್‌ ಅವರಿಗೆ ಅಭಿನಂದನೆಗಳನ್ನು ತಿಳಿಸಿದ ಪ್ರಧಾನಿ ಮೋದಿ, ನಿಮಗೆ ವಯಸ್ಸು ಹಾಗೂ ರಾಜಕೀಯ ಅನುಭವವಿದೆ, ಪಕ್ಷವನ್ನು ಮತ್ತಷ್ಟು ಬೆಳೆಸುವ ಜವಾಬ್ದಾರಿ ನಿಮ್ಮ ಮುಂದಿದೆ ಎಂದರು. 

ಪಕ್ಷದ ವಿಚಾರದಲ್ಲಿ ನಾನು ಕಾರ್ಯಕರ್ತನಾಗಿದ್ದು ನನಗೂ ನಿವೇ ಬಾಸ್‌ ಎಂದು ಮೋದಿ ಹೇಳಿದರು. ನಿಮ್ಮ ಮುಂದೆ ಬಿಜೆಪಿ ಹೊಣೆಗಾರಿಕೆ ಮಾತ್ರವಲ್ಲ ಎನ್‌ಡಿಎ ನಡುವಿನ ಸಹಕಾರವನ್ನು ಖಚಿತಪಡಿಸುವ ಜವಾಬ್ದಾರಿ ಇದೆ ಎಂದರು.

 ವಾಜಪೇಯಿ, ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಬಿಜೆಪಿ ಶೂನ್ಯದಿಂದ ಬೆಳವಣಿಗೆಯಾಯಿತು. ವೆಂಕಯ್ಯ ನಾಯ್ಡು ಮತ್ತು ನಿತಿನ್ ಗಡ್ಕರಿ ಅವರಂತಹ ನಾಯಕರು ಪಕ್ಷವನ್ನು ವಿಸ್ತಾರಗೊಳಿಸಿದರು. ರಾಜನಾಥ್ ಸಿಂಗ್‌ ಅವರು ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯಿತು ಎಂದರು. 

ಅಮಿತ್ ಶಾ ನೇತೃತ್ವದಲ್ಲಿ ನಮ್ಮ ಪಕ್ಷ ಹಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿತು, ನಡ್ಡಾ ಅವರು ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿದರು ಎಂದು ಮೋದಿ ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಪೂರ್ಣಗೊಂಡ ಬೆನ್ನಲ್ಲೇ ಪಕ್ಷ ನಡೆಸಿದ ಚುನಾವಣೆಯಲ್ಲಿ ನಿತಿನ್ ಅವರು ಅವಿರೋಧವಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.