ADVERTISEMENT

ಮೇಘಾಲಯ, ಮಣಿಪುರ, ತ್ರಿಪುರ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ

ಪಿಟಿಐ
Published 21 ಜನವರಿ 2023, 6:20 IST
Last Updated 21 ಜನವರಿ 2023, 6:20 IST
 ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಮೇಘಾಲಯ, ಮಣಿಪುರ ಹಾಗೂ ತ್ರಿಪುರ ‘ರಾಜ್ಯ ಸ್ಥಾಪನಾ ದಿನ’ದ ಅಂಗವಾಗಿ ಈ ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಈಶಾನ್ಯ ಪ್ರದೇಶ ಕಾಯ್ದೆ–1971ರ ಅಡಿಯಲ್ಲಿ ಈ ಮೂರೂ ರಾಜ್ಯಗಳು 1972ರ ಜನವರಿ 21 ರಂದು ರಚನೆಯಾಗಿದ್ದವು.

ಕಳೆದ ಕೆಲವು ವರ್ಷಗಳಲ್ಲಿ ಮಣಿಪುರ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಭಾರತದ ಆರ್ಥಿಕತೆಗೆ ಮಣಿಪುರ ಬಲವನ್ನು ತುಂಬಲಿ ಹಾಗೂ ಜನರ ಆಕಾಂಕ್ಷೆಗಳು ನೆರವೇರಲಿ ಎಂದು ಮೋದಿ ಹೇಳಿದ್ದಾರೆ.

ADVERTISEMENT

ಕಳೆದ ಐದು ವರ್ಷಗಳಲ್ಲಿ ತ್ರಿಪುರಾ ರಾಜ್ಯದ ಅಭಿವೃದ್ಧಿಯ ದಾರಿ ಗಮನಾರ್ಹವಾಗಿವೆ. ಕೃಷಿಯಿಂದ ಕೈಗಾರಿಕೆ, ಶಿಕ್ಷಣದಿಂದ ಆರೋಗ್ಯದವರೆಗೂ ರಾಜ್ಯ ದೊಡ್ಡ ಪರಿವರ್ತನೆ ಕಂಡಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಂಸ್ಕೃತಿ, ಸಂಗೀತ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೇಘಾಲಯ ಜನರು ಉತ್ತಮ ಸಾಧನೆ ಮಾಡಿದ್ದಾರೆ. ಮೇಘಾಲಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಕೂಡ ಮೂರು ರಾಜ್ಯಗಳ ಜನರಿಗೆ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.