ADVERTISEMENT

ಭಾರತದ ಮೊದಲ 'ರ‍್ಯಾಪಿಡ್​​ ಎಕ್ಸ್‌' ಲೋಕಾರ್ಪಣೆ ಮಾಡಿದ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2023, 6:59 IST
Last Updated 20 ಅಕ್ಟೋಬರ್ 2023, 6:59 IST
<div class="paragraphs"><p> ರ‍್ಯಾಪಿಡ್​​ ಎಕ್ಸ್‌ ಲೋಕಾರ್ಪಣೆ ಮಾಡಿದ ಪ್ರಧಾನಿ </p></div>

ರ‍್ಯಾಪಿಡ್​​ ಎಕ್ಸ್‌ ಲೋಕಾರ್ಪಣೆ ಮಾಡಿದ ಪ್ರಧಾನಿ

   

ಚಿತ್ರ ಕೃಪೆ–ಪಿಟಿಐ

ನವದೆಹಲಿ: ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್ಎಕ್ಸ್ ನಿಲ್ದಾಣದಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್​ಆರ್​ಟಿಎಸ್) ಕಾರಿಡಾರ್‌ನ ಆದ್ಯತೆಯ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಉದ್ಘಾಟಿಸಿದರು.

ADVERTISEMENT

ದೇಶದ ಮೊದಲ ರಾಪಿಡ್‌ಎಕ್ಸ್ ರೈಲು: ಭಾರತದಲ್ಲಿ ಆರ್‌ಆರ್‌ಟಿಎಸ್‌ನ ಪ್ರಾರಂಭವನ್ನು ಗುರುತಿಸುವ ಮೂಲಕ ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕ ಕಲ್ಪಿಸುವ ರಾಪಿಡ್‌ಎಕ್ಸ್ ರೈಲಿಗೆ ಪ್ರಧಾನಮಂತ್ರಿ ಚಾಲನೆ ನೀಡಿದರು. ಇದು ಭಾರತದ ಮೊದಲ ರಾಪಿಡ್‌ಎಕ್ಸ್ ರೈಲು ಆಗಿದ್ದು ಇದನ್ನು "ನಮೋ ಭಾರತ್" ಎಂದು ಕರೆಯಲಾಗುತ್ತದೆ.

ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ 17 ಕಿಮೀ ಆದ್ಯತಾ ವಿಭಾಗವು ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಘಾಜಿಯಾಬಾದ್, ಗುಲ್ಧಾರ್ ಮತ್ತು ದುಹೈ ನಿಲ್ದಾಣಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್‌ 8ರಂದು ಶಂಕು ಸ್ಥಾಪನೆ ನೆರವೇರಿಸಿದ್ದರು.

ನಮ್ಮ ಮೆಟ್ರೋದ ವಿಸ್ತೃತ ಮಾರ್ಗ ಉದ್ಘಾಟನೆ: ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಎರಡು ವಿಸ್ತೃತ ಮಾರ್ಗಗಳನ್ನು ಲೋಕಾರ್ಪಣೆ ಮಾಡಿದರು.

ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮತ್ತು ಕೆಂಗೇರಿಯಿಂದ ಚಲ್ಲಘಟ್ಟ ಮಾರ್ಗಗಳನ್ನು ಔಪಚಾರಿಕ ಉದ್ಘಾಟನೆಗೆ ಕಾಯದೆ ಅ.9 ರಿಂದ ರೈಲು ಸೇವೆ ಆರಂಭಗೊಂಡಿತ್ತು.

ಇದರೊಂದಿಗೆ, 'ನಮ್ಮ ಮೆಟ್ರೊ'ದ ಒಟ್ಟು ಕಾರ್ಯಾಚರಣೆಯ ಉದ್ದ 74 ಕಿ.ಮೀಗೆ ವಿಸ್ತರಿಸಿದೆ. 66 ನಿಲ್ದಾಣಗಳೊಂದಿಗೆ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷಕ್ಕೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.