ADVERTISEMENT

ಪುಣೆ ಮೆಟ್ರೊ ಉದ್ಘಾಟಿಸಿದ ಪ್ರಧಾನಿ ಮೋದಿ, ಮೊದಲ ಟಿಕೆಟ್ ಖರೀದಿಸಿ ಪ್ರಯಾಣ

ಪಿಟಿಐ
Published 6 ಮಾರ್ಚ್ 2022, 11:24 IST
Last Updated 6 ಮಾರ್ಚ್ 2022, 11:24 IST
ಪುಣೆ ಮೆಟ್ರೊ ಉದ್ಘಾಟಿಸಿದ ಪ್ರಧಾನಿ ಮೋದಿ
ಪುಣೆ ಮೆಟ್ರೊ ಉದ್ಘಾಟಿಸಿದ ಪ್ರಧಾನಿ ಮೋದಿ   

ಪುಣೆ: ಬಹುನಿರೀಕ್ಷಿತ ಪುಣೆ ಮೆಟ್ರೊ ರೈಲು ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದಾರೆ.

ಬಳಿಕ ಮೊದಲ ಟಿಕೆಟ್ ಖರೀದಿಸಿದ ಪ್ರಧಾನಿ ಮೋದಿ, ಪುಣೆ ಮೆಟ್ರೊದಲ್ಲಿ ಚೊಚ್ಚಲ ಪ್ರಯಾಣ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಒಟ್ಟು 32.2 ಕಿ.ಮೀ. ಉದ್ದದ ಪುಣೆ ಮೆಟ್ರೊ ರೈಲು ಯೋಜನೆಯ ಪೈಕಿ 12 ಕಿ.ಮೀ. ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದರು.

ADVERTISEMENT

ಗರ್ವಾರೆ ಮೆಟ್ರೊ ನಿಲ್ದಾಣದಲ್ಲಿ ಮೆಟ್ರೊ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಅಲ್ಲಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಆನಂದನಗರ ನಿಲ್ದಾಣಕ್ಕೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.

10 ನಿಮಿಷಗಳ ಪ್ರಯಾಣದ ವೇಳೆಯಲ್ಲಿ ಪ್ರಧಾನಿಯವರು, ವಿಶೇಷ ಚೇತನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗರ್ವಾರೆ ಮೆಟ್ರೊ ನಿಲ್ದಾಣದಲ್ಲಿ ಮೋದಿ ವಸ್ತುಪ್ರದರ್ಶನವನ್ನು ವೀಕ್ಷಿಸಿದರು.

ಇಡೀ ಯೋಜನೆಯನ್ನು 11,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 2016ರ ಡಿಸೆಂಬರ್ 24ರಂದು ಪ್ರಧಾನಿಯವರು ಈ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.