ADVERTISEMENT

ಅಡ್ವಾಣಿ ಅವರಿಗೆ 93ನೇ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ

ಪಿಟಿಐ
Published 8 ನವೆಂಬರ್ 2020, 12:04 IST
Last Updated 8 ನವೆಂಬರ್ 2020, 12:04 IST
ಪ್ರಧಾನಿ ಮೋದಿಗೆ ಕೇಕ್‌ ತಿನ್ನಿಸುತ್ತಿರುವ ಎಲ್‌.ಕೆ ಅಡ್ವಾಣಿ                                                    –ಟ್ವಿಟರ್‌ ಚಿತ್ರ
ಪ್ರಧಾನಿ ಮೋದಿಗೆ ಕೇಕ್‌ ತಿನ್ನಿಸುತ್ತಿರುವ ಎಲ್‌.ಕೆ ಅಡ್ವಾಣಿ                                                    –ಟ್ವಿಟರ್‌ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರನ್ನು ಭಾನುವಾರ ಭೇಟಿಯಾಗಿ, 93 ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ಬಿಜೆಪಿ ನಾಯಕರಾದ ಜೆ.ಪಿ ನಡ್ಡಾ, ಅಮಿತ್‌ ಶಾ ಅವರೂ ಇದ್ದರು. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಅಡ್ವಾಣಿ ಅವರು ಹಣಕಾಸು ಸಚಿವ, ಉಪ ಪ್ರಧಾನಿ ಮಂತ್ರಿ ಆಗಿದ್ದರು. ದೇಶದ ಅಭಿವೃದ್ಧಿಯಲ್ಲಿ ಅಡ್ವಾಣಿ ಪಾತ್ರ ಮಹತ್ತರವಾದದ್ದು, ಅವರು ಪಕ್ಷದ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು’ ಎಂದಿದ್ದಾರೆ.

‘ಅಡ್ವಾಣಿ ಅವರು ಬಿಜೆಪಿ ಕಾರ್ಯಕರ್ತರಿಗೆ ಮತ್ತು ಜನರಿಗೆ ಜೀವಂತ ಸ್ಫೂರ್ತಿ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಶುಭ ಹಾರೈಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅಡ್ವಾಣಿ ಅವರು ದೀರ್ಘಕಾಲದ ತನಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 90 ರ ದಶಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಅಡ್ವಾಣಿ ಮಹತ್ವದ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.