ನವದೆಹಲಿ: ‘ಆಪರೇಷನ್ ಸಿಂಧೂರ’ ಬಳಿಕ ಭಯೋತ್ಪಾದನೆ ಕುರಿತು ಭಾರತದ ನಿಲುವು ದೃಢಪಡಿಸಲು ವಿವಿಧ ದೇಶಗಳಿಗೆ ಪ್ರವಾಸ ತೆರಳಿದ್ದ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿ ಭೇಟಿ ಮಾಡಿದರು.
ಪ್ರವಾಸ ಕೈಗೊಂಡಿದ್ದ ಸಂಸದರು ಈ ವೇಳೆ ಪ್ರಧಾನಿ ಅವರ ಜೊತೆಗೆ ಅನುಭವ ಹಂಚಿಕೊಂಡರು. ವಿವಿಧ ಪಕ್ಷಗಳಿಗೆ ಸೇರಿದ ಸುಮಾರು 50 ಮಂದಿ ಹಾಲಿ ಸಂಸದರು ಪ್ರವಾಸ ಕೈಗೊಂಡಿದ್ದರು.
ಮಾಜಿ ಸಂಸದರು, ಮಾಜಿ ರಾಯಭಾರಿಗಳು ಕೂಡಾ ಈ ನಿಯೋಗದಲ್ಲಿದ್ದು, ಒಟ್ಟು 33 ದೇಶಗಳಿಗೆ ಭೇಟಿ ನೀಡಿದ್ದರು. ನಾಲ್ಕು ನಿಯೋಗದ ನೇತೃತ್ವವನ್ನು ಎನ್‌ಡಿಎ ಪಕ್ಷಗಳ ಸದಸ್ಯರು, ಮೂರು ನಿಯೋಗಗಳ ನೇತೃತ್ವವನ್ನು ಕ್ರಮವಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಸಂಸದರು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.